ಕ್ರೈಂ

ಸಂಚಾರಿ ನಿಯಮ ಪಾಲಿಸದ ವಾಹನ ಸವಾರರಿಗೆ ಪೊಲೀಸರಿಂದ ಸ್ಪೆಷಲ್ ಕ್ಲಾಸ್

ನಿಯಮ ಉಲ್ಲಂಘನೆ: 25 ಕ್ಕೂ ಅಧಿಕ ಬೈಕ್ ಗಳು ವಶಕ್ಕೆ

ಕುಶಾಲನಗರ, ಜೂ 05: ಕುಶಾಲನಗರದಲ್ಲಿ ಹೆಲ್ಮೆಟ್ ಧರಿಸದೆ, ಸಂಚಾರಿ‌ ನಿಯಮ ಪಾಲಿಸದ ವಾಹನ ಸವಾರರಿಗೆ ಪೊಲೀಸ್ ಅಧಿಕಾರಿಗಳು ಸ್ಪೆಷಲ್ ಕ್ಲಾಸ್ ತೆಗೆದುಕೊಂಡ ಘಟನೆ ಕುಶಾಲನಗರದಲ್ಲಿ ನಡೆಯಿತು.

ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಅವರು ಸಂಚಾರಿ ನಿಯಮ ಪಾಲಿಸುವ ಬಗ್ಗೆ ಸವಾರರಲ್ಲಿ ಜಾಗೃತಿ ಮೂಡಿಸಿದರು.

ಸಂಚಾರಿ ನಿಯಮ‌ ಉಲ್ಲಂಘನೆ, ಅಸುರಕ್ಷಿತ ವಾಹನ ಚಾಲನೆ ಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಎಚ್ಚರಿಸಿದರು.

ಈ‌ ಸಂದರ್ಭ ವೃತ್ತ‌ನಿರೀಕ್ಷಕರಾದ ಪ್ರಕಾಶ್, ರಾಜೇಶ್ ಕೋಟ್ಯಾನ್, ಠಾಣಾಧಿಕಾರಿ ಕುಸುಮ, ಲೋಹಿತ್, ಉಮಾ ಮತ್ತು ಸಿಬ್ಬಂದಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!