ಟ್ರೆಂಡಿಂಗ್

ಭಾನುವಾರ ವರ್ತಕರ ಸ್ನೇಹಮಿಲನ, ವ್ಯಾಪಾರ ವಹಿವಾಟು ಸ್ಥಗಿತಕ್ಕೆ ಮನವಿ

ಕುಶಾಲನಗರ, ಮೇ 10:  ಕುಶಾಲನಗರ ಚೇಂಬರ್ ಅಪ್ ಕಾಮರ್ಸ್ ವತಿಯಿಂದ ಭಾನುವಾರ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ವರ್ತಕರ ಸ್ನೇಹ ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಂದು ವ್ಯಾಪಾರಸ್ಥರು ತಮ್ಮ ವ್ಯಾಪಾರ ಸ್ಥಗಿತ ಮಾಡಿ ಪಾಲ್ಗೊಳ್ಳಲು ಅಧ್ಯಕ್ಷ ರವೀಂದ್ರ.ವಿ.ರೈ ಮನವಿ ಮಾಡಿಕೊಂಡಿದ್ದಾರೆ.

ಕುಶಾಲನಗರ ಪತ್ರಿಕಾ ಭವನದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ತಕರು ದೈನಂದಿನ ಜಂಜಾಟದಿಂದ ಹೊರ ಬಂದು ತಮ್ಮ ಕುಟುಂಬ ಸಮೇತರಾಗಿ ಭಾಗವಹಿಸಬೇಕು. ಅಂದು ಬೆಳ್ಳಿಗ್ಗೆ 10.30 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಚೇಂಬರ್ ಅಪ್ ಕಾಮರ್ಸ್ ಉಪಾಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್.ಕೆ.ಸತೀಶ್, ಪಿ.ಪಿ.ಸತ್ಯನಾರಾಯಣ, ಬಿ.ಅಮೃತ್ ರಾಜ್ ಭಾಗವಹಿಸಲಿದ್ದಾರೆ.

ಮಡಿಕೇರಿಯ ವಿಕ್ರಂ ಜಾದುಗಾರ ಅವರಿಂದ ಮ್ಯಾಜಿಕ್ ಶೋ ನಡೆಯಲಿದೆ.

ವರ್ತಕರ ಕುಟುಂಬ ಸದಸ್ಯರಿಗೆ ವಿವಿಧ ರೀತಿಯ ಆಟೋಟಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ 4.30 ಗಂಟೆಗೆ ಮುಖ್ಯ ಅತಿಥಿಗಳಾಗಿ ಎಸ್.ಎಲ್.ಎನ್. ಸಂಸ್ಥೆಯ ಎನ್.ವಿಶ್ವನಾಥನ್, ಚೇಂಬರ್ ನ ಕೊಡಗು ಜಿಲ್ಲಾ ನಿರ್ದೇಶಕ ಎಂ.ಡಿ.ರಂಗಸ್ವಾಮಿ, ಕೆ.ಎಸ್.ರಾಜಶೇಖರ್, ಟಿ.ಆರ್.ಶರವಣಕುಮಾರ್ ಪಾಲ್ಗೊಳ್ಳಲಿದ್ದಾರೆ.

ಕಾರ್ಕಳದ ವಾಗ್ಮಿ ರಾಜೇಂದ್ರ ಭಟ್ ಸ್ಫೂರ್ತಿದಾಯಕ ಮಾತುಗಳನ್ನು ಮಾತನಾಡಲಿದ್ದಾರೆ.

ಸಾಗರಿಕ ಸ್ವಾಗತ ನೃತ್ಯ ಮಾಡಲಿದ್ದಾರೆ. ಕುಶಾಲನಗರ ಚೇಂಬರ್ ಅಪ್ ಕಾಮರ್ಸ್ ಸಂಸ್ಥೆಗೆ ಕಡಿಮೆ ದರದಲ್ಲಿ ನಿವೇಶನ ನೀಡಿರುವ ಹೆಚ್.ಪಿ.ಯೋಗೀಶ್, ಡಿಸಿಸಿ ಬ್ಯಾಂಕ್ ಗೆ ನಿರ್ದೇಶಕರಾಗಿ ಆಯ್ಕೆಯಾದ ಟಿ.ಆರ್.ಶರವಣಕುಮಾರ್, ಚೇಂಬರ್ ಗಾಗಿ ದುಡಿದ ಹಿರಿಯ ವರ್ತಕರಾದ ತನ್ವಿರ್ ಅಹಮದ್, ಆರ್.ಬಿ.ರಾವಲ್ ಅವರನ್ನು ಸನ್ಮಾನಿಸಲಾಗುವುದು ಎಂದು ಕಾರ್ಯದರ್ಶಿ ಕೆ.ಎಸ್.ನಾಗೇಶ್ ತಿಳಿಸಿದರು.

ಗೋಷ್ಠಿಯಲ್ಲಿ ನಿರ್ದೇಶಕ ಕೆ.ಎನ್. ದೇವರಾಜ್ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!