ಕುಶಾಲನಗರ, ಮಾ 27: ಸೋಮವಾರಪೇಟೆ ತಾಪಂ ಇಒ ಕೆ.ಬಿ.ಜಯಣ್ಣ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಆದಾಯ ಮೀರಿದ ಆಸ್ತಿ ಗಳಿಕೆ ಸೂಚನೆ ಮೇರೆಗೆ ದಾಳಿ ನಡೆಸಿದ ಕೊಡಗು ಲೋಕಾಯುಕ್ತ ಕುಶಾಲನಗರದ ಹೌಸಿಂಗ್ ಬೋರ್ಡ್ ನಲ್ಲಿರುವ ಅವರ ಮನೆ ಹಾಗೂ ಪ್ರಸಕ್ತ ಕರ್ತವ್ಯ ನಿರ್ವಹಿಸುತ್ತಿರುವ ಕಡಬ ಕಛೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿತು.
ಲೋಕಾಯುಕ್ತ ಇನ್ಸ್ ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಆದಾಯ ಮೀರಿ ಶೇ. 140 ರಷ್ಟು ಹೆಚ್ಚಿನ ಸಂಪತ್ತು ಪತ್ತೆಯಾಗಿದೆ. 9 ಲಕ್ಷ 20 ಸಾವಿರ ನಗದು, 150 ಗ್ರಾಂ ಚಿನ್ನ, ಕುಶಾಲನಗರ, ಕೂಡುಮಂಗಳೂರು ವ್ಯಾಪ್ತಿಯಲ್ಲಿ ಒಟ್ಟು 1 ಕೋಟಿ ಮೌಲ್ಯದ 3 ಮನೆ, 25 ಲಕ್ಷ ಮೌಲ್ಯದ 3 ಕಾರು, 5 ಲಕ್ಷ ಮೌಲ್ಯದ 2 ನಿವೇಶನ, 3 ಲಕ್ಷ ಮೌಲ್ಯದ 4 ಎಕರೆ ಕೃಷಿ ಜಮೀನು ಹೊಂದಿರುವುದು ಪತ್ತೆಯಾಗಿದ್ದು ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.
Back to top button
error: Content is protected !!