ಸಭೆ

ಹೆಬ್ಬಾಲೆ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ: ಸಂಘಕ್ಕೆ ರೂ.9.5 ನಿವ್ವಳ ಲಾಭ

ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ಸಂಘದ ಏಳಿಗೆಗೆ ಒತ್ತು ನೀಡಬೇಕು : ಅಧ್ಯಕ್ಷ ಮೋಹನ್

ಕುಶಾಲನಗರ, ಸೆ 12: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಸಂಘದ ಅಧ್ಯಕ್ಷ ಎಚ್.ಟಿ.ಮೋಹನ್ ಹೇಳಿದರು.

ಹೆಬ್ಬಾಲೆ ಬನಶಂಕರಿ ಸಮುದಾಯ ಭವನದ ಆವರಣದಲ್ಲಿ  ಏರ್ಪಡಿಸಿದ್ದ ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ನಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಂಘವು ಉತ್ತಮವಾಗಿ ಕಾರ್ಯ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದು, 2024-25ನೇ ಸಾಲಿನಲ್ಲಿ ರೂ.9.5 ಲಕ್ಷ ನಿವ್ವಳ ಲಾಭಗಳಿಸಿದೆ. ಗ್ರಾಮೀಣಾ ಪ್ರದೇಶದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ರೈತಾಪಿ ವರ್ಗದ ಅನುಕೂಲತೆಗಾಗಿ ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಹಕಾರ ನೀಡಿದರೇ ಇನ್ನಷ್ಟು ಲಾಭದಾಯಕ ಸಂಘವಾಗಿ ಮುಂದುವರೆಸಲು ಸಾದ್ಯ ಎಂದರು. ಸಂಘದ ಏಳಿಗೆಗೆ ಸರ್ವ ಸದಸ್ಯರ ಸಹಕಾರ ತುಂಬ ಅಗತ್ಯ ಎಂದರು. ಸಹಕಾರಿ ಕಾನೂನು ಪ್ರಕಾರ ಒಂದು ಆಡಳಿತ ಅವಧಿಯ ಕನಿಷ್ಠ ಮೂರು ಮಹಾಸಭೆಗಳಿಗೆ ಸದಸ್ಯರು ಹಾಜರಾಗುವುದು ಕಡ್ಡಾಯ. ತಪ್ಪಿದಲ್ಲಿ ಸದರಿ ಸದಸ್ಯತ್ವವನ್ನು ತಟಸ್ಥವಾಗುವುದು ಎಂದು ಹೇಳಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಗಿರೀಶ್ ಮಾತನಾಡಿ,ಸಂಘದ ಕ್ಷೇಮ ನಿಧಿಗೆ ರೂ.87,720,ಶಿಕ್ಷಣ ನಿಧಿಗೆ ರೂ.5263,ಡೆಡ್ ಸ್ಟಾಕ್ ಸವಕಳಿ ನಿಧಿಗೆ ರೂ.2553,ಮುಳುಗುವ ಸಾಲ ನಿಧಿಗೆ ರೂ.2553,ಕಟ್ಟಡ ನಿಧಿಗೆ ರೂ.16,145, ಸಿಬ್ಬಂದಿ ಕಲ್ಯಾಣ ನಿಧಿಗೆ ರೂ.4704,ಸಿಬ್ಬಂದಿ ಬೊನಸ್ಸು ನಿಧಿಗೆ ರೂ.1,28,400,ಸದಸ್ಯರಿಗೆ ಡಿವಿಡೆಂಟ್ ರೂ.1,00,987 ಕಾಯ್ದಿರಿಸಲಾಗಿದೆ ಎಂದರು.ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು.
ಸಂಘದ ಉಪಾಧ್ಯಕ್ಷೆ ಸರೋಜಮ್ಮ,ನಿರ್ದೇಶಕರಾದ ಎಚ್.ಎಸ್.ಅಂಬಿಕಾ,ಎಚ್.ಎಸ್.ಕೇಶವ,ಎಚ್.ಟಿ.ನಾರಾಯಣ, ಎಚ್.ಆರ್.ಪ್ರದೀಪ್ ಕುಮಾರ್, ಎಚ್.ಎನ್.ಮಹಾದೇವ, ಎಂ.ಎಂ.ಮಹಾದೇವ,ಎಚ್.ಆರ್.ಮಣಿಕಂಠ,ಎಚ್.ಜೆ.ರವಿ.,ಹೆಚ್.ಎಸ್.ಶರತ್ ಕುಮಾರ್, ಎಚ್.ವಿ.ಸೋಮಶೇಖರ್, ಮೇಲ್ವಿಚಾರಕಿ ಎಂ.ಕೆ.ಗೀತಾ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಭರತ್ ಪಾಲ್ಗೊಂಡಿದ್ದರು.
ಸಭೆಯ ಮೊದಲಿಗೆ ನಡೆದ ಚರ್ಚೆಯಲ್ಲಿ ಸಂಘದ ಕೆಲವು ಲೋಪದೋಷಗಳನ್ನು ನೆರೆದಿದ್ದ ಸದಸ್ಯರುಗಳು ಪ್ರಸ್ತಾಪಿಸಿದಾಗ ಸ್ವಲ್ಪ ಗೊಂದಲ ಉಂಟಾದರೂ ಸಂಘದ ಅಧ್ಯಕ್ಷರು ಸಮರ್ಪಕವಾದ ಉತ್ತರವನ್ನು ನೀಡಿ ಸಮಸ್ಯೆಯನ್ನು ತಿಳಿಗೊಳಿಸಿದರು.ಸದಸ್ಯರಾದ ಜಯಂತಿ,ಎಚ್.ಟಿ.ದಿನೇಶ್, ಶಿವರಾಮ್ ,ಮಧುಸೂದನ್, ಪರಮೇಶ್,ಪ್ರಭಾಕರದ, ಗಣೇಶ್,ಮೋಹನ್ ಮತ್ತಿತರ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ನಂತರ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!