ಕುಶಾಲನಗರ, ಫೆ 22:
ಕೊಡಗು ಜಿಲ್ಲೆಯ 5 ತಾಲೂಕಿನಲ್ಲಿ ಕಡಿತಗೊಳಿಸಿರುವ ಐಪಿ ಸೆಟ್ ಗಳಿಗೆ ಮರು ಸಂಪರ್ಕ ಕಲ್ಪಿಸಲು ಆಗ್ರಹಿಸಿ ರೈತರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಎರಡನೇ ದಿನವೂ ಮುಂದುವರೆದಿದೆ. ಮಡಿಕೇರಿಯ ಕಾರ್ಯ ನಿರ್ವಾಹಕ ಅಭಿಯಂತರ ಕಚೇರಿ ಮುಂದೆ ನಡೆಯುತ್ತಿರುವ ಧರಣಿಗೆ ಇದುವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ. ರೈತರ ಈ ಒಂದು ಬೇಡಿಕೆ ಕಾರ್ಯ ನಿರ್ವಾಹಕ ಅಧಿಕಾರಿಯವರು ಕಿಂಚಿತ್ತು ಸ್ಪಂದಿಸದೆ ಕಚೇರಿ ಹಿಂಬಾಗಲಿನಿಂದ ಪರಾರಿಯಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ರೈತರು ಧರಣಿ ಮುಂದುವರಿಸಿದ್ದಾರೆ.
ಹೋರಾಟದಲ್ಲಿ ರೈತ ಮುಖಂಡರಾದ ಮನು ಸೊಮ್ಮಯ್ಯ , ಚಂದ್ರಶೇಖರ್ ಹೇರೂರು , ಕ್ಲಿವ ಪೊನ್ನಪ್ಪ , ಕುಮಾರಪ್ಪ ಎಂ ಏನ್ ಅರುಣ್ ಕುಮಾರ್ , ಶಾಶ್ವತ್, ಅಯ್ಯಣ್ಣ ಮತ್ತಿತರರು ಇದ್ದರು.
Back to top button
error: Content is protected !!