ಕಾರ್ಯಕ್ರಮ

ಬೈಚನಹಳ್ಳಿಯಲ್ಲಿ ಗ್ರಾಮಸ್ಥರ ಹೋರಾಟಕ್ಕೆ ಸ್ಪಂದಿಸಿದ ಶಾಸಕರು: ಹಿಂದೂ ರುದ್ರಭೂಮಿಗೆ ಜಾಗ ಮಂಜೂರು: ದಾಖಲೆ ಹಸ್ತಾಂತರ: ಶಾಸಕರಿಗೆ ಸನ್ಮಾನ

ಕುಶಾಲನಗರ, ಸೆ 09: ಬೈಚನಹಳ್ಳಿಯಲ್ಲಿ ಗ್ರಾಮಸ್ಥರ ಹೋರಾಟಕ್ಕೆ ಸ್ಪಂದಿಸಿದ ಶಾಸಕ ಡಾ.ಮಂತರ್ ಗೌಡ ಅವರು ಹಿಂದೂ ರುದ್ರಭೂಮಿಗೆ 52 ಸೆಂಟ್ ಜಾಗ ಮಂಜೂರು ಮಾಡಿದ್ದು ದಾಖಲೆ ಹಸ್ತಾಂತರಿಸಿದರು.

ವಾರ್ಡ್ ಸದಸ್ಯ ಬಿ.ಎಲ್.ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿದರು.
ಈ ಸಂದರ್ಭ ಗ್ರಾಮಸ್ಥರ ಪರವಾಗಿ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರ, ಉಪಾಧ್ಯಕ್ಷೆ ಪುಟ್ಟ ಲಕ್ಷ್ಮಿ, ಕುಡಾ ಅಧ್ಯಕ್ಷ ಪ್ರಮೋದ್ ‌ಮುತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್, ಸದಸ್ಯರಾದ ಖಲೀಮುಲ್ಲಾ, ಅಮೃತ್‌ರಾಜ್, ಸುರಯ್ಯಭಾನು, ದಿನೇಶ್, ಪ್ರಕಾಶ್, ತಹಸೀಲ್ದಾರ್ ಕಿರಣ್ ಗೌರಯ್ಯ, ಸಿಒ ಗಿರೀಶ್, ಮಾಜಿ ಸದಸ್ಯ ಅಶೋಕ್, ಜಿಪಂ‌ ಮಾಜಿ ಅಧ್ಯಕ್ಷ ಹೆಚ್.ಎಸ್.ಅಶೋಕ್ ಗೆಳೆಯರ ಬಳಗದ ಪ್ರಮುಖರು ಗ್ರಾಮಸ್ಥರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!