ಕುಶಾಲನಗರ ಮಾ 3: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿ ಪಂಚಾಯಿತಿ ಅಧ್ಯಕ್ಷರಾದ ಭಾಸ್ಕರ್ ನಾಯಕ್ ರವರು 5 ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹನಿಯನ್ನು ಮಕ್ಕಳಿಗೆ ಹಾಕುವ ಮೂಲಕ ಚಾಲನೆ ನೀಡಿದರು ನಂತರ ಮಾತನಾಡಿದ ಅಧ್ಯಕ್ಷ
ಭಾಸ್ಕರ್ ನಾಯಕರವರು ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 6 ಕಡೆಗಳಲ್ಲಿ ಲಸಿಕೆ ನೀಡುವ ವ್ಯವಸ್ಥೆಯನ್ನು ಮಾಡಿದ್ದು ಪ್ರವಾಸಿಗರಿಗೂ ಲಸಿಕೆಯನ್ನು ನೀಡಬೇಕು ಎಂಬ ಉದ್ದೇಶಕ್ಕಾಗಿ ಅಣೆಕಟ್ಟೆ ಮುಂಭಾಗದಲ್ಲಿ ಕೂಡ ಲಸಿಕೆಯನ್ನು ನೀಡಲಾಗುತ್ತಿದೆ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಪೋಲಿಯೋ ಮುಕ್ತ ಭಾರತ ನಿರ್ಮಾಣಕ್ಕೆ ಕಳೆದ ಹತ್ತು ವರ್ಷಗಳಿಂದ ವಿವಿಧಡೆಗಳಲ್ಲಿ ಪೋಲಿಯೋ ಲಸಿಕೆ ಹನಿಯನ್ನು ನೀಡುವ ಮುಖಾಂತರ ಪೋಲಿಯೋ ಮುಕ್ತ ಭಾರತವನ್ನು ನಿರ್ಮಾಣ ಮಾಡುತ್ತಿದ್ದೇವೆ ಈ ವರ್ಷವೂ ಕೂಡ 5 ವರ್ಷದ ಒಳಗಿನ ಪ್ರತಿ ಮಕ್ಕಳಿಗೂ 2 ಹನಿ ಪೋಲಿಯೋ ಲಸಿಕೆ ಹನಿಯನ್ನು ಹಾಕಿಸುವ ಮುಖಾಂತರ ಪೋಲಿಯೋ ಮುಕ್ತ ಭಾರತ ನಿರ್ಮಾಣಕ್ಕೆ ಪಣತೊಡೋಣ ಎಂದು ಕರೆ ನೀಡಿದರು ಈ ಸಂದರ್ಭ ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಮುಕೇಶ್, ಚಂದ್ರೇಶ್,ಮಂಜುನಾಥ್ ಆಶಾ ಕಾರ್ಯಕರ್ತೆ ಸುಲೇಖ ಮತ್ತು ಅಂಗನವಾಡಿ ಕಾರ್ಯಕರ್ತೆಯರಾದ ಜ್ಯೋತಿ, ಮಂಜುಳಾ, ಶೋಭಾ ಮಾತಿದರು ಉಪಸ್ಥಿತರಿದ್ದರು
Back to top button
error: Content is protected !!