ಕುಶಾಲನಗರ, ಫೆ. 28: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಬ್ರಿಟಿಷ್ ರ ಕಾಲದ ಗೋ ಸದನದ ಜಾಗವು ಸಾಮಾಜಿಕ ಅರಣ್ಯ ಇಲಾಖೆಯ ಹೆಸರಿಗೆ ಖಾತೆಯಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಮೂರು ಇಲಾಖೆಯ ಅಧಿಕಾರಿಗಳ ಸಭೆಯು ಕುಶಾಲನಗರ ತಹಶಿಲ್ದಾರರ ಕಿರಣ್ ಗೌರಯ್ಯ ನವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ 8 ಗ್ರಾಮಗಳ ಗ್ರಾಮಸ್ಥರು, ಜಿಲ್ಲಾ ಉಸ್ತುವಾರಿ ಸಚಿವರ ಜನತಾದರ್ಶನ ಕಾರ್ಯಕ್ರಮದಲ್ಲಿ ನೀಡದ ಅರ್ಜಿಯ ಮನವಿಗೆ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಕುಶಾಲನಗರ ತಾಲ್ಲೂಕು ಕಂದಾಯ ಇಲಾಖೆಯ ವತಿಯಿಂದ ಜಂಟಿ ಇಲಾಖೆಗಳ ಸಭೆಯನ್ನು ಕರೆಯಲಾಗಿ, ಸಭೆಯಲ್ಲಿ ಹಾಜರಿದ್ದ ತಾಲ್ಲೂಕು ಮತ್ತು ವಲಯ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಗೋ ಕದನಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆದವು, ಅದರೆ ಖಾತೆ ಬದಲಾವಣೆ, ಮತ್ತು ಉನ್ನತ ಮಟ್ಟದ ಚರ್ಚೆಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮತ್ತು ಮಡಿಕೇರಿ ಕ್ಷೇತ್ರದ ಶಾಸಕರ ನೇತ್ರತ್ವದಲ್ಲಿ ಸಭೆಯನ್ನು ಸದ್ಯದಲ್ಲಿ ಕರೆದು ಶಾಸಕ ತೀರ್ಮಾನದಂತೆ ಕ್ರಮ ವಹಿಸುವುದರ ಬಗ್ಗೆ ಮುಂದಿನ ತೀರ್ಮಾನಕ್ಕೆ ಕಾರ್ಯ ಪ್ರವೃತರಾಗಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಕೂಡಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಟಿ.ಗಿರೀಶ್, ಪಶುಪಾಲನಾ ಇಲಾಖೆಯ ತಾಲ್ಲೂಕು ವೈದ್ಯಾಧಿಕಾರಿ ಡಾ. ನಾಗರಾಜ್, ಕುಶಾಲನಗರ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ, ಸಂಜೀವ್ ಕುಮಾರ್ ಆರ್. ಸಿಂಧೆ ಹುದುಗೂರು ಸಾಮಾಜಿಕ ಅರಣ್ಯ ಇಲಾಖೆಯ ಅರಣ್ಯಾಧಿಕಾರಿ ಖಾನ್, ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯರಾದ ಹೆಚ್. ಎಸ್. ರವಿ. ರತ್ನಮ್ಮ. ಉಮಾಮಹೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಟಿ. ಎಂ . ಚಾಮಿ. ರೈತ ಮುಂಖಡರಾದ ಐ. ಎಸ್ .ಗಣೇಶ್, ಅಶೋಕ್, ಉಮಾ, ಬೋಪಯ್ಯ ಕಂದಾಯ ಇಲಾಖೆಯ ನಿರೀಕ್ಷಕ ಸಂತೋಷ್, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
Back to top button
error: Content is protected !!