ಸನ್ಮಾನ

ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೆ.ಪ್ರಕಾಶ್ ಅವರಿಗೆ ಪೋಷಕರಿಂದ ಸನ್ಮಾನ

ಕುಶಾಲನಗರ, ಫೆ 14: ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾಗಿ ಕಳೆದ ಹತ್ತು ವರ್ಷಗಳಿಂದ ಸುಧೀರ್ಘ ಸೇವೆ ಸಲ್ಲಿಸಿ ಆಲೂರು ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ವರ್ಗಾವಣೆಗೊಂಡು ತೆರಳಿರುವ ಕೆ. ಪ್ರಕಾಶ್ ಅವರನ್ನು ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಹತ್ತನೆ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಪೋಷಕರ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಳೆದ ಹತ್ತು ವರ್ಷಗಳಿಂದ ಪ್ರಾಂಶುಪಾಲರಾಗಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರ ಪಾಲಿಗೆ ಆಶಾಕಿರಣವಾಗಿದ್ದ ಕೆ. ಪ್ರಕಾಶ್ ಶೈಕ್ಷಣಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಜಿಲ್ಲಾಮಟ್ಟದಲ್ಲಿ ಮಾದರಿಯಾಗಿ ರೂಪಿಸಿದ ಪರಿಣಾಮ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಪ್ರಕಾಶ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭ ನೆರೆದ ವಿದ್ಯಾರ್ಥಿಗಳು ಹಾಗೂ ಪೋಷಕರ ಕಣ್ಣಾಲಿಗಳು ತೇವಗೊಂಡಿದ್ದಂತು ಶಾಲೆ ಹಾಗೂ ಶಾಲೆಯ ವಿದ್ಯಾರ್ಥಿಗಳ ಜೊತೆ ಹೊಂದಿದ್ದ ನಿಜ ಕಾಯಕ ಶ್ರದ್ದೆಯ ಪ್ರತೀಕವಾಗಿತ್ತು‌.
ಕೂಡಿಗೆಯ ಮೊರಾರ್ಜಿ ದೇಸಾಯಿ ಪ್ರಾಂಶುಪಾಲೆ ಭಾರತಿ,
ಈ ಸಂದರ್ಭ ಪೋಷಕ ಸಮಿತಿಯ ಪ್ರಮುಖರಾದ ಎಂ.ಎ. ರುಬೀನಾ, ಶೋಭಾ ಪ್ರಕಾಶ್,ದಿವ್ಯ, ವಿಶ್ವಕುಮಾರ್,ಮೋಹನ್, ಮಂಜುನಾಥ್, ಅಂಬಿಕಾ, ಮಣಿಕಂಠ ಸೇರಿದಂತೆ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!