ಕುಶಾಲನಗರ, ಏ 24: ಇಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಶಿಕ್ಷಣ ಕೋರ್ಸ್ ಗಳ ಪ್ರವೇಶಕ್ಕಾಗಿ ಇದೇ ಏಪ್ರಿಲ್ 18 ಹಾಗೂ 19 ರಂದು 3 ಲಕ್ಷದ 49 ಸಾವಿರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದಾರೆ. ಈ ವರ್ಷದ ಸಿಇಟಿ ಪ್ರವೇಶ ಪರೀಕ್ಷೆ ವಿದ್ಯಾರ್ಥಿಗಳ ಪಾಲಿಗೆ ಸ್ನೇಹಪರವಾಗಿ ಇರದೆ ದುಸ್ವಪ್ನವಾಗಿ ಕಾಡಿದೆ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣ ಗೊಂದಲಕ್ಕೆ ಒಳಗಾಗಿದ್ದಾರೆ ಇದಕ್ಕೆ ಪ್ರಮುಖ ಕಾರಣವಾಗಿರುವುದು “ಕರ್ನಾಟಕ ಪರೀಕ್ಷಾ ಮಂಡಳಿ”(ಕೆಇಎ) ಇದು ಎಲ್ಲರಿಗೂ ತಿಳಿದಿರುವ ವಿಚಾರ. ಹೊರಪಠ್ಯದಿಂದ ಹೆಚ್ಚು ಪ್ರಶ್ನೆಗಳು (ಔಟ್ ಆಫ್ ಸಿಲಬಸ್)ಬಂದಿರುವುದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅವರು ಕನಸು ಭಗ್ನವಾಗದ ರೀತಿ ಕೆಇಎ ಮತ್ತು ಸರ್ಕಾರ ಗಂಭೀರವಾಗಿ ಈ ವಿಷಯವನ್ನು ಪರಿಗಣಿಸಿ ಸೂಕ್ತವಾದ ರೀತಿಯಲ್ಲಿ ನ್ಯಾಯ ದೊರಕಿಸಿಕೊಡಬೇಕೆಂದು ಕರ್ನಾಟಕ ಅನುದಾನರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ . ಕೊಡಗು ಜಿಲ್ಲಾ ಸಂಚಾಲಕರಾದ ಎನ್.ಎನ್ ಶಂಭುಲಿಂಗಪ್ಪರವರು ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು, ಪ್ರತಿ ವರ್ಷ ಪರೀಕ್ಷೆ ನಡೆದಾಗ ಸಾಮಾನ್ಯವಾಗಿ ಒಂದಲ್ಲ ಒಂದು ವಿಷಯ ಕಠಿಣವಾಗಿರುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಕೆಇಎ ಇತಿಹಾಸದಲ್ಲಿ, ಪ್ರಶ್ನೆ ಪತ್ರಿಕೆಯಲ್ಲಿ ಹೊರ ಪಠ್ಯ ದಿಂದ (ಔಟ್ ಆಫ್ ಸಿಲಬಸ್) ಒಟ್ಟು 53 ಪ್ರಶ್ನೆಗಳನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಿತ ನಾಲ್ಕು ವಿಷಯಗಳಲ್ಲಿ ಕೇಳಿರುವುದು, ಎಷ್ಟೋ ಕನಸುಗಳನ್ನು ಹೊತ್ತು ಪರೀಕ್ಷೆ ಬರೆಯಲು ಬಂದಂತ ವಿದ್ಯಾರ್ಥಿಗಳ ಗೊಂದಲಕ್ಕೆ ಕಾರಣವಾಯಿತು. ಇನ್ನೂ ಆತಂಕದಲ್ಲಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಸರ್ಕಾರ ಮತ್ತು ಕೆಇಎ ಮುಂದಿರುವ ಮಹತ್ವದ ಸವಾಲು,ಒಂದು ಒಳ್ಳೆಯ ನಿರ್ಧಾರವನ್ನು ವಿದ್ಯಾರ್ಥಿಗಳಿಗೆ ಕೊಡಬೇಕಾಗಿದೆ, ಅವರ ಎಷ್ಟೋ ಕನಸುಗಳಿಗೆ ದಾರಿದೀಪವಾಗಬೇಕಾಗುತ್ತದೆ.ಇದರಿಂದ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಗೊಂದಲ ನಿವಾರಣೆಯಾಗುತ್ತದೆ. ಪುನ: ಪರೀಕ್ಷೆ ನಡೆಸುವುದು ಸೂಕ್ತ ಅಥವಾ ಕೃಪಾಂಕ ನೀಡುವುದು ಉತ್ತಮ ಮಾರ್ಗವಾಗಬಹುದು ಇದರಿಂದ ಎಷ್ಟೋ ಲಕ್ಷಾಂತರ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಯುತ್ತದೆ. ವಿದ್ಯಾರ್ಥಿಗಳಿಗೆ ನ್ಯಾಯ ದೊರಕಲಿ ಎಲ್ಲಾ ಗೊಂದಲಗಳಿಗೆ ಆದಷ್ಟು ಶೀಘ್ರು ತೆರೆ ಬೀಳಲಿ ಎಂದು ಕರ್ನಾಟಕ ಅನುದಾನರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ, ಕೊಡಗು ಜಿಲ್ಲಾ ಸಂಚಾಲಕರಾದ ಎನ್. ಎನ್. ಶಂಭುಲಿಂಗಪ್ಪ, ಕಾಲೇಜು ವಿಜ್ಞಾನ ವಿಭಾಗ ಮುಖ್ಯಸ್ಥ ವಿಕ್ರಂ, ಪ್ರಾಂಶುಪಾಲೆ ಕ್ಲಾರ ರೇಷ್ಮಾ, ಉಪನ್ಯಾಸಕರಾದ ಸೌಮ್ಯ, ನಮಿತಾ, ಸ್ವಾಮಿ ಒತ್ತಾಯಿಸಿದರು.
Back to top button
error: Content is protected !!