ಕುಶಾಲನಗರ, ಜ 31:
ಕುಶಾಲನಗರದ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಆಶ್ರಯದಲ್ಲಿ ವಾಸವಿ ಯುವತಿಯರ ಸಂಘದಿಂದ ಕುಶಾಲನಗರ ಪುರಸಭೆ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪುರಸಭೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಅಧ್ಯಕ್ಷ ಬಿ.ಎಲ್.ಉದಯಕುಮಾರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸ್ವಚ್ಚ ಪರಿಸರ ನಿರ್ಮಾಣದಲ್ಲಿ ಪೌರಕಾರ್ಮಿಕ ಸೇವೆ ಹಾಗೂ ಶ್ರಮ ಅಮೂಲ್ಯವಾದುದು. ಇಂತಹ ಕಾಯಕಯೋಗಿಗಳನ್ನು ಗೌರವಿಸುವ ಅವಕಾಶ ದೊರೆಯುವುದು ಸೌಭಾಗ್ಯದ ಕೆಲಸ ಎಂದರು.
ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸಿದ ಪೌರ ಕಾರ್ಮಿಕ ಮಹಿಳೆಯರಾದ ರಾಣಿ, ಗೌರಮ್ಮ, ಲಕ್ಷ್ಮಿ, ರೂಪ ಅವರನ್ನು ಸನ್ಮಾನಿಸಿ ಗೌರವಿಸಿ ನೆನೆಪಿನ ಕಾಣಿಕೆ ನೀಡಲಾಯಿತು.
ಈ ಸಂದರ್ಭ ಆರ್ಯವೈಶ್ಯಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಬಿ.ಎಲ್.ಸತ್ಯನಾರಾಯಣ, ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ಕವಿತಾ ಪ್ರವೀಣ್, ಕಾರ್ಯದರ್ಶಿ ಸ್ನೇಹ ನಿತಿನ್, ಯುವಜನ ಸಂಘದ ಅಧ್ಯಕ್ಷ ಕೆ.ಪ್ರವೀಣ್, ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮಿ ಶ್ರೀನಿವಾಸ್, ಪುರಸಭಾ ಸದಸ್ಯರಾದ ಬಿ.ಅಮೃತ್ ರಾಜ್, ವಿ.ಎಸ್.ಆನಂದ ಕುಮಾರ್, ಎಂ.ಬಿ.ಸುರೇಶ್, ಬಿ. .ಎಲ್.ಜಗದೀಶ್ ಮತ್ತಿತರರು ಇದ್ದರು.
Back to top button
error: Content is protected !!