ಕುಶಾಲನಗರ, ಜ 19: ವಿದ್ಯಾವರ್ಧಕ ಸಂಘ ಹೆಬ್ಬಾಲೆಯ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ 2024ನೇ ಸಾಲಿನ ನೂತನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಹೆಚ್.ವಿ. ಶಿವಪ್ಪ ಅವರು ಇಂದು ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಹೆಚ್.ಕೆ ಪ್ರಸನ್ನ ಮತ್ತು ಕಾರ್ಯದರ್ಶಿಯಾಗಿ ಎಚ್. ಪಿ. ಚಂದ್ರಕುಮಾರ್ ಆಯ್ಕೆಯಾದರು.
ಉಳಿದಂತೆ ನಿರ್ದೇಶಕರಾಗಿ ರಾಜಶೇಖರ ಎಚ್.ಎಸ್, ವಿಜಯ ಎಚ್. ಎ, ಶ್ರೀಧರ ಎಚ್. ಜೆ, ಪ್ರಸನ್ನ ರೆಡ್ಡಿ, ಮಂಜುನಾಥ್, ಸುದರ್ಶನ್, ತನುಕುಮಾರ್, ದಾಮೋದರ, ಪುಟ್ಟರಾಜು, ಮಾದೇವ, ರವಿ ಆಯ್ಕೆಯಾದರು.
ಚುನಾವಣಾ ಉಸ್ತುವಾರಿಯನ್ನು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ವೆಂಕಟ್ ನಾಯಕ್ ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಬಸವರಾಜ್ ಶೆಟ್ಟಿ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ನಡೆಸಿಕೊಟ್ಟರು.
Back to top button
error: Content is protected !!