ಧಾರ್ಮಿಕ
ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜೆ

ಕುಶಾಲನಗರ, ಅ 16: ನವರಾತ್ರಿ ಹಬ್ಬದ ಮೊದಲ ದಿನವಾದ ಬಾನುವಾರ ಕುಶಾಲನಗರದ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ದೇವಿಗೆ ಬಾಲ ಪುಷ್ಪ ಅಲಂಕಾರವನ್ನು ದೇವಸ್ಥಾನದ ಅರ್ಚಕರಾದ ಗಿರೀಶ್ ಭಟ್ ಮತ್ತು ಪ್ರಮೋದ್ ಭಟ್ ನೇತೃತ್ವದಲ್ಲಿ ನಡೆಯಿತು.
ನವರಾತ್ರಿಯ ಮೊದಲ ದಿನ ದೇವಿಯು ಮಗುವನ್ನು ಜನನ ಮಾಡಿಕೊಂಡು ನಂತರದ ದಿನಗಳಲ್ಲಿ ಆ ಮಗುವೇ ದೊಡ್ಡದಾಗಿ ಎಲ್ಲಾ ರಾಕ್ಷಸರನ್ನು ಸಂಹಾರ ಮಾಡುವುದಕ್ಕಾಗಿ ಉಗ್ರ ರೂಪ ತಾಳಿ, 9 ದಿನಗಳು ಒಂದೊಂದು ಅವತಾರವೆತ್ತಿ ಭಕ್ತರಿಗೆ ಅನುಗ್ರಹ ಮಾಡುವುದು ವಾಡಿಕೆ ಎಂದು ಶಾಸ್ತ್ರದಲ್ಲಿ ಉಲೇಖವಿದೆ ಎಂದು ಅರ್ಚಕ ಗಿರೀಶ್ ಭಟ್ ತಿಳಿಸಿದರು.
9 ದಿನಗಳು 9 ಮಾದರಿಯ ಅವತಾರ ವಿಶೇಷ ಅಲಂಕಾರ ಮಾಡಿ ಭಕ್ತರನ್ನು ಸಂತಸಗೊಳಿಸಲಾಗುತ್ತೆ. ಮೊದಲ ದಿನದ ಸೇವಾರ್ಥದಾರರಾದ ಕೆ.ಜೆ.ಚಿನ್ನಸ್ವಾಮಿ ಕುಟುಂಬಸ್ಥರು. ಮುಂದಿನ 8 ದಿನವೂ ಬೇರೆ ಬೇರೆ ಭಕ್ತಾದಿಗಳು ಸೇವೆಯನ್ನು ಮಾಡಿಸುತ್ತಾರೆ ಎಂದು ತಿಳಿಸಿದರು.
ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್.ಉದಯ್ ಕುಮಾರ್, ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮಿ ಶ್ರೀನಿವಾಸ್, ವಾಸವಿ ಯುವಜನ ಸಂಘದ ಅಧ್ಯಕ್ಷ ಕೆ.ಪ್ರವೀಣ್, ಯುವತಿಯರ ಸಂಘದ ಅಧ್ಯಕ್ಷೆ ಕವಿತಾ ಪ್ರವೀಣ್, ಆರ್ಯವೈಶ್ಯ ಮಂಡಳಿ ಪದಾಧಿಕಾರಿಗಳು ಮತ್ತು ಸದಸ್ಯರು ದೇವಿಯ ದರ್ಶನ ಪಡೆದು ಪುನೀತರಾದರು.



