ಕುಶಾಲನಗರ, ಅ 14: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂದಾಜು 5.2 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ನೆರವೇರಿಸಿದರು.
ಈ ಸಂದರ್ಭ ಉಪಾಧ್ಯಕ್ಷೆ ಶಶಿಕಲಾ ಅಭಿವೃದ್ಧಿ ಅಧಿಕಾರಿ ಸಂತೋಷ್ ಹಾಗೂ ವಾರ್ಡಿನ ಸದಸ್ಯರಾದ ಬೋಗಪ್ಪ, ಶಿವಮ್ಮ ಹಾಗೂ ಶಾಲಾ ಮುಖ್ಯೋಪಾಧ್ಯಾಯರು, ಪಂಚಾಯಿತಿ ನೌಕರ ಅವಿನಾಶ್ ಉಪಸ್ಥಿತರಿದ್ದರು.
ಅಧ್ಯಕ್ಷರು ಗುತ್ತಿಗೆದಾರರಿಗೆ ಕಾಮಗಾರಿಯ ಗುಣಮಟ್ಟವನ್ನು ಕಾಪಾಡುವದರೊಂದಿಗೆ ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ನಂತರ ಶಾಲಾ ಮುಖ್ಯೋಪಾಧ್ಯಾಯರು ಅಧ್ಯಕ್ಷರ ಬಳಿ ಶಾಲಾ ಕೊಠಡಿಯ ಹಿಂಭಾಗ ದೊಡ್ಡ ಗಾತ್ರದ ಎರಡು ಮರಗಳು ಬೀಳುವ ಸ್ಥಿತಿಯಲ್ಲಿದ್ದು ತೆರವು ಮಾಡಿಸಿಕೊಡಬೇಕೆಂದು ಮನವಿ ಮಾಡಿದರು. ಅಧ್ಯಕ್ಷ ಭಾಸ್ಕರ್ ನಾಯಕ್ಅ ತಕ್ಷಣ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿ ಈಗಾಗಲೇ ಶಾಲಾ ಕೊಠಡಿಯ ಹಿಂಭಾಗದಲ್ಲಿರುವ ಮರಗಳನ್ನು ತೆರವು ಮಾಡುವ ಬಗ್ಗೆ ಪಂಚಾಯಿತಿಯಿಂದ ಪತ್ರ ಬರೆಯಲಾಗಿದ್ದು ಈಗ ಶಾಲೆಗೆ ರಜೆ
ಇರುವುದರಿಂದ ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದರು. ನಂತರ ಶಾಲೆಯ ಸಮಸ್ಯೆಗಳನ್ನು ಆಲಿಸಿದರು.
Back to top button
error: Content is protected !!