ಕ್ರೀಡೆ

ರಾಜ್ಯಮಟ್ಟದ ಹಾಕಿ: ಮೈಸೂರು ವಿಭಾಗ ಪ್ರಥಮ, ಕಲ್ಬುರ್ಗಿ ತಂಡ ದ್ವಿತೀಯ

 ಕುಶಾಲನಗರ ಅ 11: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ , ಶಾಲಾ ಶಿಕ್ಷಣ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲದ ರಾಜ್ಯ ಮಟ್ಟದ ಬಾಲಕರು ಮತ್ತು ಬಾಲಕಿಯರ ಪ್ರಾಥಮಿಕ, ಮತ್ತು ಪ್ರೌಢಶಾಲಾ ವಿಭಾಗದ ಹಾಕಿ ಪಂದ್ಯಾವಳಿಯು
ಕೂಡಿಗೆಯ ಸರ್ಕಾರಿ ಕ್ರೀಡಾ ಪ್ರೌಢಶಾಲಾ ಹಾಕಿ ಟರ್ಫ್ ಮೈದಾನದಲ್ಲಿ ಬುಧವಾರ ಮುಕ್ತಯಗೊಂಡಿತು.

ರಾಜ್ಯ ಮಟ್ಟದ 14 ವಯೋಮಾನದ ಬಾಲಕರ
ಹಾಕಿ ಪಂದ್ಯಾವಳಿಯಲ್ಲಿ ಮೈಸೂರು ವಿಭಾಗದ ತಂಡವು ಪ್ರಥಮ ಸ್ಥಾನ ಪಡೆದು ರಾಷ್ಟ್ರೀಯ ಹಾಕಿ ಟೂರ್ನಿಗೆ ಆಯ್ಕೆಗೊಂಡಿತು.
ಕಲ್ಬುರ್ಗಿ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟಿತು.
ಮೈಸೂರು ತಂಡವು 13 ಗೋಲು ಗಳಿಸಿ ವಿಜೇತಗೊಂಡು ರಾಷ್ಟ್ರೀಯ ಟೂರ್ನಿಗೆ ಆಯ್ಕೆಗೊಂಡಿದೆ.
ಕಲ್ಬುರ್ಗಿ ತಂಡವು 11 ಗೋಲು ಗಳಿಸಿತು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್,
ರಾಷ್ಟ್ರೀಯ ಟೂರ್ನಿಗೆ ಆಯ್ಕೆಗೊಂಡ ಮೈಸೂರು ವಿಭಾಗದ
ತಂಡಗಳಿಗೆ ಟ್ರೋಫಿ ವಿತರಿಸಿದರು.

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್ ಪಲ್ಲೇದ್, ಕ್ರೀಡಾಶಾಲೆಯ ಮುಖ್ಯ ಶಿಕ್ಷಕ ಬಿ.ಟಿ.ದೇವಕುಮಾರ್, ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್,
ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಎಲ್.ಸುಕುಮಾರಿ,
ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕ ಬಿ.ಟಿ.ಪೂರ್ಣೇಶ್, ತಾಂತ್ರಿಕ ಅಧಿಕಾರಿಗಳಾದ ಎನ್.ಎಲ್.ಸುರೇಶ್ ಕುಮಾರ್ ಪಿ.ಇ.ನಂದ, ಗಣೇಶ್ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರು ಇತರರು ಇದ್ದರು.
ವಿಜೇತ ತಂಡಗಳು ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡೆಯಲ್ಲಿ ಭಾಗವಹಿಸಲಿವೆ.
ಟೂರ್ನಿಯಲ್ಲಿ ನಾಲ್ಕು
ವಿಭಾಗಗಳಾದ ಕಲಬುರ್ಗಿ, ಬೆಳಗಾವಿ, ಬೆಂಗಳೂರು, ಮೈಸೂರು ವಿಭಾಗಗಳ ತಂಡಗಳು ಪಾಲ್ಗೊಂಡು
ಗೆಲುವಿಗಾಗಿ ತೀವ್ರ ಸೆಣಸಾಟ ನಡೆಸಿದವು.

Related Articles

Leave a Reply

Your email address will not be published. Required fields are marked *

Back to top button
error: Content is protected !!