ಕಾರ್ಯಕ್ರಮ

ಸರ್ಕಾರಿ ಪ.ಪೂರ್ವ ಕಾಲೇಜಿನ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳ ಟ್ರಸ್ಟ್ ಕಚೇರಿ ಉದ್ಘಾಟನೆ

ಕುಶಾಲನಗರ, ಅ 06: ಹಳೆ ವಿದ್ಯಾರ್ಥಿ ಸಂಘಗಳು ಕೇವಲ ಹೆಸರಿಗೆ ಮಾತ್ರವಾಗಿ ಉಳಿಯದೇ ರಚನಾತ್ಮಕ ಕೆಲಸದ ಮೂಲಕ ಇಂದಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕೆಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆಯ ಉಪಪ್ರಾಂಶುಪಾಲ ಪರಮೇಶ್ವರಪ್ಪ ಹೇಳಿದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳ ಟ್ರಸ್ಟ್ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಿರಿಯ ವಿದ್ಯಾರ್ಥಿಗಳು ಬದುಕಿನ ಏಳುಬೀಳುಗಳ ಮಹತ್ವ, ವಿದ್ಯಾರ್ಥಿ ಜೀವನದ ಮೌಲ್ಯವನ್ನು ತಿಳಿದವರಾಗಿರುವುದರಿಂದ ಇಂದಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಮೂಲಕ ಹೊಸ ಸಮಾಜದ ನಿರ್ಮಾಣಕ್ಕೆ ನೆರವಾಗಬೇಕು ಎಂದರು.
ಹಳೆ ವಿದ್ಯಾರ್ಥಿಗಳ ಟ್ರಸ್ಟ್ ಗೌರವ ಅಧ್ಯಕ್ಷ ವಿ.ಎಸ್. ಆನಂದ್ ಕುಮಾರ್ ಮಾತನಾಡಿ, ಹಳೆ ವಿದ್ಯಾರ್ಥಿಗಳ ಸಂಘದಿಂದ ಹಮ್ಮಿಕೊಳ್ಳಲು ಉದ್ದೇಶಿಸಿರುವ ಅಭಿವೃದ್ಧಿ ಕಾರ್ಯಗಳು ತಡವಾದರೂ ಪರವಾಗಿಲ್ಲ ಹಂತಹಂತವಾಗಿ ಅನುಷ್ಠಾನಗೊಳಿಸಲು ಶಕ್ತಿ‌ಮೀರಿ ಪ್ರಯತ್ನಿಸಬೇಕಿದೆ. ಆ ಮೂಲಕ ತಮ್ಮ ಕೊಡುಗೆಯನ್ನು ಮಾದರಿ ಕಾರ್ಯವಾಗಿಸಬೇಕಿದೆ ಎಂದರು.
ಶಿಕ್ಷಕ ಉರಾ ನಾಗೇಶ್ ಮಾತನಾಡಿ, ಸಮಾಜಮುಖಿ ಕಾರ್ಯಗಳಲ್ಲಿ ವಿದ್ಯಾರ್ಥಿ ಸಂಘಗಳು ಕ್ರಿಯಾಶೀಲವಾಗಿ ತೊಡಗಿಕೊಳ್ಳುವುದು ಕೂಡ ಕಾಲೇಜು ಕಲಿಸಿದ ಸಂಸ್ಕಾರದ ಫಲವಾಗಿರುತ್ತದೆ ಎಂದರು. ನಿಮ್ಮ ಉತ್ಸಾಹ ಇಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಲಿ, ಶಾಲೆ ಇನ್ನಷ್ಟು ಅಭಿವೃದ್ಧಿ ಹೊಂದಲು ನಿಮ್ಮೆಲ್ಲರ ಸಹಕಾರವಿರಲೆಂದು ಆಶಿಸಿದರು.
ಈ ಸಂಧರ್ಭ ಹಳೆ ವಿದ್ಯಾರ್ಥಿಗಳ ಟ್ರಸ್ಟ್ ಅಧ್ಯಕ್ಷ ಶಿವರಾಜ್, ಉಪಾಧ್ಯಕ್ಷೆ ದಿವ್ಯ, ಪ್ರಧಾನ ಕಾರ್ಯದರ್ಶಿ ಆದಂ.ಎಸ್, ಕಾನೂನು ಸಲಹೆಗಾರರಾದ ಶರತ್ ಕುಮಾರ್, ಸಂಘಟನಾ ಕಾರ್ಯದರ್ಶಿ ರವಿ, ನಿರ್ದೇಶಕರಾದ ಹನೀಫ್, ಗಣೇಶ್, ರಿನೀತಾ, ಲಕ್ಷ್ಮಿ, ಮತ್ತಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!