ಕ್ರೈಂ

ಬೈಕ್ ಕಳ್ಳತನ‌ ಪ್ರಕರಣ: ಆರೋಪಿ‌ ಬಂಧನ, ಬೈಕ್ ಗಳ ವಶ

ಕುಶಾಲನಗರ,‌ಅ 03: ಎರಡು ಬೈಕ್ ಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕುಶಾಲನಗರ ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಗೊಂದಿಬಸವನಹಳ್ಳಿ ಗ್ರಾಮದ ರಾಜು ಎಂಬವರ ಪುತ್ರ ಸುಬ್ರಮಣಿ (26) ಬಂಧಿತ ಆರೋಪಿ. ಈತ 2018 ರಲ್ಲಿ ಗುಂಡುರಾವ್ ಬಡಾವಣೆಯಲ್ಲಿ ಹೀರೋ ಹೋಂಡ ಸ್ಪ್ಲೆಂಡರ್ ಹಾಗೂ 2023 ರಲ್ಲಿ ಸರಕಾರಿ ಆಸ್ಪತ್ರೆಯ ಆವರಣದಲ್ಲಿದ್ದ ಫಿಯಾರೋ ಬೈಕ್ ಕಳ್ಳತನ ಮಾಡಿದ್ದ. ಈತನಿಂದ ಎರಡು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಟೌನ್ ಠಾಣಾಧಿಕಾರಿಗಳಾದ ಎಚ್.ವಿ.ಚಂದ್ರಶೇಖರ್, ಎಚ್.ಟಿ.ಗೀತಾ ಮುಂದಾಳತ್ವದಲ್ಲಿ ಕ್ರೈಂ ವಿಭಾಗದ ಎ.ಎಸ್.ಐ.ವೆಂಕಟೇಶ್, ಸಿಬ್ಬಂದಿಗಳಾದ ಸಂದೀಪ್ ರೈ, ರಂಜಿತ್, ಪ್ರಕಾಶ್, ಪ್ರವೀಣ್, ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!