ಕುಶಾಲನಗರ, ಸೆ 20: ಬ್ಯಾಡಗೊಟ್ಟದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಶಿಬಿರದಲ್ಲಿ ವಿನಾಯಕ ಗೆಳೆಯರ ಬಳಗ ಹಾಗೂ ವನವಾಸಿ ಕಲ್ಯಾಣ ವೇದಿಕೆ ವತಿಯಿಂದ ನಡೆಯುತ್ತಿರುವ ಗಣೇಶೋತ್ಸವ ಅಂಗವಾಗಿ ಧಾರ್ಮಿಕ ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಿದ್ದಲಿಂಗಪುರದ ಶ್ರೀ ರಾಜೇಶನಾಥ್ ಸ್ವಾಮೀಜಿ ಧಾರ್ಮಿಕ ಪ್ರವಚನ ನೀಡಿದರು. ಪುನರ್ವಸತಿ ಶಿಬಿರದ ನಿವಾಸಿಗಳು, ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭ ವಿನಾಯಕ ಗೆಳೆಯ ರ ಬಳಗ ದ ಅಧ್ಯಕ್ಷರಾದ ಕೃಷ್ಣ, ಕೊಡಗು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹರೀಶ್, ವನವಾಸಿ ಕಲ್ಯಾಣ ದ ತಾಲ್ಲೂಕು ಅಧ್ಯಕ್ಷ ಸಿದ್ದಣ್ಣ, ತಾಲ್ಲೂಕು ಕಾರ್ಯದರ್ಶಿ ಹರ್ಷ ಎಂ. ಬಿ. ಖಜಾಂಚಿ ಅನಿಶ್, ಆರ್ ಎಸ್ ಎಸ್ ನ ತಾಲ್ಲೂಕು ಕಾರ್ಯವಾಹಕ ರಮೇಶ್ ಬೊಟ್ಟುಮನೆ, ತಾಲ್ಲೂಕು ಸೇವಾ ಪ್ರಮುಖ ಮುರುಳೀಧರ್, ಹಿಂದೂ ಜಾಗರಣ ವೇದಿಕೆಯ ಪ್ರವೀಣ್, ಗ್ರಾಮಸ್ಥರಾದ ಮುತ್ತಣ್ಣ, ಬಸವ, ಕಾಳ, ರವಿ, ಸಿದ್ದ, ಮಂಜೇಶ್, ಸುಬ್ರಮಣಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
Back to top button
error: Content is protected !!