ಕಾರ್ಯಕ್ರಮ

ಕೊಡಗು ಮೊಗೇರ ಗ್ರಾಮ ವಿಕಾಸ ಯೋಜನೆ ವಾರ್ಷಿಕೋತ್ಸವಕ್ಕೆ ಚಾಲನೆ

ಕುಶಾಲನಗರ, ಸೆ 17:  ಕೊಡಗು ಜಿಲ್ಲಾ ಮೊಗೇರ ಗ್ರಾಮ‌ವಿಕಾಸ ಯೋಜನೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಸುಂಟಿಕೊಪ್ಪದ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆಯಿತು.‌ಯೋಜನೆಯ‌ ಕೊಡಗು ಜಿಲ್ಲಾ ಅಧ್ಯಕ್ಷ ಗೌತಮ್ ಶಿವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮೊಗೇರ ಸೇವಾ ಸಮಾಜದ ಸ್ಥಾಪಕಾಧ್ಯಕ್ಷ ಟಿ.ಸದಾನಂದ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಜಿಲ್ಲೆಯ ಮೊಗೇರ ಸಮಾಜದ ಹಲವು ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಆರಂಭಿಸಲಾಗ ಸಂಘಟನೆ ಮೂಲಕ ಇಂದು ಸಮಾಜ ಬಾಂಧವರು ಬಹುತೇಕ‌ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ‌ಮಾಡಲಾಗಿದೆ. ಸಮುದಾಯ ಬಾಂಧವರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಬಲಿಷ್ಠವಾಗಲು ಗ್ರಾಮ ವಿಕಾಸ ಯೋಜನೆ ಸಹಕಾರಿಯಾಗಿದೆ. ಎಲ್ಲರೂ ಕೂಡ ಅಗತ್ಯ ಸಹಕಾರ ನೀಡುವ ಮೂಲಕ ಈ ಯೋಜನೆ‌ ಮತ್ತಷ್ಟು ಬಲಿಷ್ಠಗೊಳಿಸಲು, ಬೆಳವಣಿಗೆಯಾಗಲು, ಮಾದರಿಯಾಗಲು ಕೈಜೋಡಿಸಬೇಕಿದೆ ಎಂದರು. ಗ್ರಾಮ ವಿಕಾಸ ಪ್ರಧಾನ ಸಂಚಾಲಕ ಎ.ಸುರೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ, ವೈದ್ಯಕೀಯ ಸೌಲಭ್ಯಗಳಿಗೆ ಯೋಜನೆ ಆದ್ಯತೆ ನೀಡುವ ಮೂಲಕ ಆರ್ಥಿಕ‌ ನೆರವು‌ ಒದಗಿಸಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು.‌

ಮೊಗೇರ ಸೇವಾ ಸಮಾಜದ ಕೊಡಗು ಜಿಲ್ಲಾ ಅಧ್ಯಕ್ಷ ಪಿ.ಬಿ.ಜನಾರ್ಧನ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪಿ.ಎಂ.ರವಿ ಮಾತನಾಡಿದರು.

ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಶಿವಪ್ಪ,

ಸಿದ್ದಾಪುರದ ಅಮೃತ ಮೊಗೇರ ಸಂಘದ ಅಧ್ಯಕ್ಷ ಮಂಜು ಬರಡಿ, ಶಾಂತಳ್ಳಿ ಉಪ ತಹಸೀಲ್ದಾರ್ ತುಕ್ರಪ್ಪ, ಸೋಮವಾರಪೇಟೆ ಡಿಆರ್ ಎಫ್ ಒ ಪಿ.ಟಿ.ಶಶಿ, ಹೆಬ್ಬಾಲೆ ಕೆನಾರ ಬ್ಯಾಂಕ್ ನ ಶೇಷಪ್ಪ, ಹಾಕತ್ತೂರು ಗ್ರಾಮೀಣ ಬ್ಯಾಂಕ್ ನ ಲೋಕಯ್ಯ, ಸಮಾಜದ ಸ್ಥಾಪಕ‌ ಸದಸ್ಯ ಸಿ.ಲೋಹಿತ್, ಆರೋಗ್ಯ ಇಲಾಖೆಯ ಪ್ರೇಮ ಆನಂದ್, ಗ್ರಾಮ‌ವಿಕಾಸ ಯೋಜನೆಯ ಉಪಾಧ್ಯಕ್ಷ ಎಂ.ಪಿ.ದೇವಪ್ಪ, ಕೋಶಾಧಿಕಾರಿ ಪಿ.ಜಿ.ಗಣೇಶ್ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ಮೊಗೇರ ಗ್ರಾಮ‌ವಿಕಾಸ ಯೋಜನೆಯ ಲಾಂಛನ ಅನಾವರಣಗೊಳಿಸಲಾಯಿತು. ಗೌರಿ ಹಬ್ಬದ ಪ್ರಯುಕ್ತ ಕಾರ್ಯಕ್ರಮದಲ್ಲಿ‌ ಪಾಲ್ಗೊಂಡಿದ್ದ ಮುತ್ತೈದೆಯರಿಗೆ ಅರಿಶಿನ‌ ಕುಂಕುಮ ನೀಡಿ ಶುಭ ಹಾರೈಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!