ಅರಣ್ಯ ವನ್ಯಜೀವಿ

ಭುವನಗಿರಿ ಗ್ರಾಮದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಸೆರೆ

ಕುಶಾಲನಗರ, ಆ 31:ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದ ಸೋಮಣ್ಣ ಎಂಬವರ ಹೊಲದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದೆ.
ಸುವರ್ಣಗೆಡ್ಡೆ ಹೊಲದಲ್ಲಿ ಕಳೆ ತೆಗೆಯುವ ಸಂದರ್ಭದಲ್ಲಿ ಮಹಿಳೆಯರಿಗೆ ಹಾವು ಕಂಡುಬಂದಿದೆ. ಕಣಿವೆಯ ಅರಣ್ಯ ಇಲಾಖೆಯವರ ಗಮನಕ್ಕೆ ತರಲಾಗಿ, ಅರಣ್ಯ ರಕ್ಷಕರಾದ ವೇದ ಮತ್ತು ಅರುಣ್ ಅವರು ಹೆಬ್ಬಾವನ್ನು ಸೆರೆ ಹಿಡಿದು ಸೀಗೆಹೊಸೂರು ಸಮೀಪದ ಜೇನುಕಲ್ಲು ಮೀಸಲು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಈ ಸಂದರ್ಭದಲ್ಲಿ ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ ಚಂದ್ರು, ಗ್ರಾಮಸ್ಥರಾದ ಶ್ರೀನಿವಾಸ, ಕುಶಲ, ಸೋಮಣ್ಣ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!