ಪ್ರತಿಭಟನೆ

ವಿದ್ಯುತ್ ದರ ಏರಿಕೆ ಖಂಡಿಸಿ‌ ಕುಶಾಲನಗರದಲ್ಲಿ‌ ಬಿಜೆಪಿ ಪ್ರತಿಭಟನೆ

ಕುಶಾಲನಗರ, ಜೂ 06: ವಿದ್ಯುತ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಸರಕಾರದ ವಿರುದ್ಧ ಕುಶಾಲನಗರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ‌ನಡೆಯಿತು.
ನಗರ ಬಿಜೆಪಿ ಘಟಕದ ಆಶ್ರಯದಲ್ಲಿ ಗಣಪತಿ ದೇವಾಲಯದ ಮುಂದೆ ಪ್ರತಿಭಟಿಸಿದ ಬಿಜೆಪಿಗರು‌ ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಧಿಕ್ಕಾರ ಕೂಗಿ ಆಕ್ರೋಷ ವ್ಯಕ್ತಪಡಿಸಿದರು.
ಈ ಸಂದರ್ಭ‌ ಮಾತನಾಡಿದ ನಗರ ಬಿಜೆಪಿ ಅಧ್ಯಕ್ಷ ವಿ.ಎನ್.ಉಮಾಶಂಕರ್, ಉಚಿತ ಘೋಷಣೆಗಳ ಮೂಲಕ ಮತದಾರರಿಗೆ ಆಮೀಷವೊಡ್ಡಿ ಅಧಿಕಾರ ಹಿಡಿದ ಕಾಂಗ್ರೆಸ್ ಇದೀಗ ಅಧಿಕಾರಕ್ಕೆ ಬಂದ ನಂತರ ಘೋಷಣೆಗಳನ್ನು ಜಾರಿಗೊಳಿಸಲು ಷರತ್ತುಗಳನ್ನು ವಿಧಿಸುತ್ತಿರುವುದು ಖಂಡನೀಯ. ಉಚಿತ ಎಂದ ಮೇಲೆ‌ ಕಂಡೀಷನ್ ರಹಿತವಾಗಿ ಎಲ್ಲರಿಗೂ ಜಾರಿಗೊಳಿಸಬೇಕಿದೆ ಎಂದರು.
ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ನಿಂದ ಮೋಸ ಹೋದ ಮತದಾರರು ಬಿಜೆಪಿಯ‌ ಕೈ ಹಿಡಿಯಲಿದ್ದಾರೆ. ಬಿಜೆಪಿ ಖಂಡಿತವಾಗಿ ಕಾಂಗ್ರೆಸ್ ಗಿಂತ ಮೇಲುಗೈ ಸಾಧಿಸಲಿದೆ ಎಂದರು.
ಮತ್ತೋರ್ವ ಹಿರಿಯ‌ ಮುಖಂಡ ಜಿ.ಎಲ್.ನಾಗರಾಜ್ ಮಾತನಾಡಿ, ಅಧಿಕಾರಕ್ಕೆ ಬಂದ 15 ದಿನಗಳಲ್ಲಿ ಒಂದು ಸರಕಾರದ ವಿರುದ್ದ ಹೋರಾಟಗಳು ಪ್ರಾರಂಭವಾಗುತ್ತದೆ ಎಂದರೆ ಅದು‌ ನಾಚಿಗೆಗೇಡು. ನೈಜ ಫಲಾನುಭವಿಗಳಿಗೆ ಸರಕಾರದ ಯೋಜನೆಗಳು ಲಭಿಸಲಿದೆ. ಅಭಿವೃದ್ಧಿ ಯೋಜನೆಗಳು ಉಳ್ಳವರ ಪಾಲಾಗದಂತೆ, ಚುನಾವಣಾ ಮುನ್ನ ಕೊಟ್ಟ‌ ಮಾತಿನಂತೆ ಸರಕಾರ ನಡೆದುಕೊಳ್ಳಬೇಕಿದೆ ಎಂದರು.
ಈ ಸಂದರ್ಭ ಕುಡಾ ಅಧ್ಯಕ್ಷ ಎಂ.ಎಂ.ಚರಣ್, ಮಂಡಲ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ, ವಕ್ತಾರ ಕೆ.ಜಿ.ಮನು, ಪುರಸಭೆ ಸದಸ್ಯರಾದ ಡಿ.ಕೆ.ತಿಮ್ಮಪ್ಪ, ರೂಪ ಉಮಾಶಂಕರ್, ಶೈಲ ಕೃಷ್ಣಪ್ಪ, ಅಮೃತ್ ರಾಜ್, ಕೂಡುಮಂಗಳೂರು ಗ್ರಾಪಂ ಉಪಾಧ್ಯಕ್ಷ ಭಾಸ್ಕರ್ ನಾಯಕ್, ಪ್ರಮುಖರಾದ ನವನೀತ್, ಮಧುಸೂದನ್, ಪ್ರವೀಣ್, ಚಂದ್ರಶೇಖರ್, ಬೋಸ್‌ಮೊಣ್ಣಪ್ಪ, ಬಿ.ಜೆ.ಅಣ್ಣಯ್ಯ, ಆದರ್ಶ್, ಸುಮನ್, ಗೀತಾ, ರವಿ, ಪ್ರವೀಣ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!