ಕುಶಾಲನಗರ, ಏ 11:: ಸ್ಮಾನಕ್ಕೆ ನದಿಗಿಳಿದ ಅಯ್ಯಪ್ಪಸ್ವಾಮಿ ಮಾಲಾಧಾರಿ ತಂದೆ, ಮಗ ಕಾವೇರಿ ನದಿ ಪಾಲಾದ ಘಟನೆ ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಚಿಕ್ಕ ಬೆಟಗೇರಿಯಲ್ಲಿ ನಡೆದಿದೆ.
ಮೂಲತಃ ಶನಿವಾರಸಂತೆಯ ಮಣಿಕಂಠ (45) ಅವರ ಪುತ್ರ ಪ್ರೀತಂ (15) ಮೃತ ದುರ್ದೈವಿಗಳು.
ವಿಷು ಪೂಜೆಗೆ ಶಬರಿಮಲೆಗೆ ತೆರಳಲು ಮಾಲೆ ಧರಿಸಿದ್ದ ಮೃತರಿಬ್ಬರು ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸಂಜೆ ಶಬರಿಮಲೆಗೆ ತೆರಳಲು ನಿರ್ಧರಿಸಿದ್ದರು.
ಚಿಕ್ಕ ಬೆಟಗೇರಿಯ ಸಂಬಂಧಿ ರವಿ ಎಂಬವರ ಮನೆಗೆ ಆಗಮಿಸಿ ಅವರೊಂದಿಗೆ ಶಬರಿಮಲೆಗೆ ತೆರಳಲು ಸಿದ್ದತೆ ನಡೆಸಿ ಸಮೀಪದ ಕಾವೇರಿ ನದಿಗೆ ಮಧ್ಯಾಹ್ನ ಸ್ನಾನಕ್ಕೆ ತೆರಳಿದ್ದ ಸಂದರ್ಭ ಪ್ರೀತಂ ನೀರಿನಲ್ಲಿ ಮುಳುಗಿದ್ದು ಆತನ ರಕ್ಷಣೆಗೆ ತೆರಳಿದ ಮಣಿಕಂಠ ಕೂಡ ಗುಂಡಿಯಲ್ಲಿ ಮುಳುಗಿದ್ದಾರೆ.
ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿಗಳು ರಾಫ್ಟ್ ಬೋಟ್ ಬಳಸಿ ದುಬಾರೆ ಈಜು ತಜ್ಞರಾದ ದೇವು, ಪ್ರತಾಪ್, ನಿತಿನ್ ನದಿಯಲ್ಲಿ ಮೃತ ದೇಹಗಳನ್ನು ಶೋಧಿಸಿ ಹೊರತೆಗೆದರು.
Back to top button
error: Content is protected !!