ಕುಶಾಲನಗರ, ಅ 20: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಗಿರಿಜನರಿಗೆ ಟಾರ್ಪಲ್ ವಿತರಣೆ ಕಾರ್ಯಕ್ರಮ ನಡೆಯಿತು.
ತಾಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ 150 ಮಂದಿ ಗಿರಿಜನ ಫಲಾನುಭವಿಗಳಿಗೆ ಟಾರ್ಪಲ್ ಒದಗಿಸುವ ಯೋಜನೆಯಡಿ ಪ್ರಾರಂಭಿಕ ಹಂತವಾಗಿ ಗುಡ್ಡೆಹೊಸೂರು, ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ 62 ಮಂದಿ ಫಲಾನುಭವಿಗಳಿಗೆ ಟಾರ್ಪಲ್ ವಿತರಣೆ ಮಾಡಲಾಯಿತು.
ಬಸವನಹಳ್ಳಿ ಆಶ್ರಮ ಶಾಲಾ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷರಾದ ಆರ್.ಕೆ.ಚಂದ್ರ ಟಾರ್ಪಲ್ ಹಸ್ತಾಂತರ ಮಾಡಿದರು.
ಈ ಸಂದರ್ಭ ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಚಂದ್ರಪ್ಪ, ಲ್ಯಾಂಪ್ಸ್ ಉಪಾಧ್ಯಕ್ಷ ಬಿ.ಎನ್.ಮನು, ಆಶ್ರಮ ಶಾಲಾ ಮುಖ್ಯ ಶಿಕ್ಷಕ ರವಿ, ಲ್ಯಾಂಪ್ಸ್ ಸಿಇಒ ಹನಿ ಕುಮಾರ್ ಇದ್ದರು.
Back to top button
error: Content is protected !!