ಕುಶಾಲನಗರ, ಅ 19: ಅಕ್ಟೋಬರ್ 21 ರಂದು ನಡೆಯಲಿರುವ ಕಾವೇರಿ ನದಿ ಉತ್ಸವದಲ್ಲಿ ಪಾಲ್ಗೊಂಡು ತಲಕಾವೇರಿಯಿಂದ ಪೂಂಪ್ಹಾರ್ ತನಕ ಯಾತ್ರೆ ಕೈಗೊಳ್ಳಲಿರುವ ದಕ್ಷಿಣ ಭಾರತದ ಸಾಧು ಸಂತರ ತಂಡ ಬುಧವಾರ ರಾಜ್ಯದ ಶ್ರೀರಂಗಪಟ್ಟಣಕ್ಕೆ ಆಗಮಿಸಿದೆ.
ಅಖಿಲ ಭಾರತ ಸನ್ಯಾಸಿ ಸಂಘದ ಸಂಸ್ಥಾಪಕರಾದ ಶ್ರೀ ರಮಾನಂದ ಸ್ವಾಮೀಜಿ ನೇತೃತ್ವದಲ್ಲಿ ಸುಮಾರು 75ಕ್ಕೂ ಅಧಿಕ ಸಾಧುಗಳು ಈ ಬಾರಿ ಕಾವೇರಿ ನದಿ ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದು ತಲಕಾವೇರಿಯಿಂದ ಪೂಂಪ್ಹಾರ್ ತನಕ ಯಾತ್ರೆ ಸಾಗಲಿದ್ದಾರೆ.
ಇದೇ ಸಂದರ್ಭ ಕೊಡಗು ಜಿಲ್ಲೆಯ ತಲಕಾವೇರಿ, ಭಾಗಮಂಡಲ, ಕುಶಾಲನಗರದಲ್ಲಿ ನಡೆಯುವ ಕಾವೇರಿ ಉತ್ಸವದಲ್ಲಿ ತಂಡ ಪಾಲ್ಗೊಳ್ಳಲಿದೆ.
Back to top button
error: Content is protected !!