ಕುಶಾಲನಗರ ಅ.19.ತಂಬಾಕು ಬೆಲೆ ಕುಸಿತದಿಂದ ಆಕ್ರೋಶಿತರಾದ ಬೆಳೆಗಾರರು ದಿಢೀರ್ ಹೆದ್ದಾರಿ ಯಲ್ಲಿ ಪ್ರತಿಭಟೆನೆಗಿಳಿದಿದ್ದರಿಂದ ಸಂಚಾರ ಅಸ್ಥವ್ಯಸ್ಥವಾಗಿದೆ.
ತಾಲೂಕಿನ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಬುಧವಾರ ಬೆಳಗಿನಿಂದಲೇ ಉತ್ತಮ ದರ್ಜೆತಂಬಾಕಿಗೂ ಕಡಿಮೆ ಬೆಲೆಗೆ ಹರಾಜಾಗಿತ್ತು. ರೈತರು ಮತ್ತು ತಂಬಾಕು ಮಂಡಳಿ ಅಧಿಕಾರಿಗಳ ನಡುವೆ ಚರ್ಚೆನಡೆದಿತ್ತಾದರೂ ಬೆಲೆ ಏರಿಕೆ ಕಾಣದ ಪರಿಣಾಮ ಆಕ್ರೋಶಿತರಾದ ಬೆಳೆಗಾರರು ಮದ್ಯಾಹ್ನ ಮಾರುಕಟ್ಟೆ ಎದುರಿನಲ್ಲೇ ಹೆದ್ದಾರಿಯಲ್ಲಿ 300 ಕ್ಕೂ ಹೆಚ್ಚು ಮಂದಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಸಂಚಾರ ಅಸ್ಥವ್ಯಸ್ತವಾಗಿದ್ದು. ವಿಷಯ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಮನವೊಲಿಸಿದರೂ ಮಂಡಳಿ ಅಧಿಕಾರಿಗಳು ಭರವಸೆ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.
Back to top button
error: Content is protected !!