ಸಭೆ

ಅಧಿಕಾರಿ ವರ್ಗ‌ ಬಡವರ ಕೆಲಸಕ್ಕೆ ಸಹಕರಿಸಿ ಪುಣ್ಯ ಕಟ್ಟಿಕೊಳ್ಳಿ: ಶಾಸಕ‌ ಅಪ್ಪಚ್ಚುರಂಜನ್

ವಿರುಪಾಕ್ಷಪುರ ಗ್ರಾಮ‌ ಅರಣ್ಯ ಹಕ್ಕು‌ ಸಮಿತಿ ಸಭೆ

ಕುಶಾಲನಗರ, ಅ 19: ನಂಜರಾಯಪಟ್ಟಣ ಗ್ರಾಪಂ‌ ವ್ಯಾಪ್ತಿಯ ವಿರುಪಾಕ್ಷಪುರ ಗ್ರಾಮ‌ ಅರಣ್ಯ ಹಕ್ಕು‌ ಸಮಿತಿ ಸಭೆ ಹೊಸಪಟ್ಟಣ ಗ್ರಾಮದ ಸಮುದಾಯ‌ ಭವನದಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ಗ್ರಾಮ ಅರಣ್ಯ ಕಾಯ್ದೆ, ಅರಣ್ಯ ಹಕ್ಕು ಸಮಿತಿ ರಚನೆ, ಕಾರ್ಯವೈಖರಿ‌, ವ್ಯಾಪ್ತಿ, ಅಗತ್ಯ ದಾಖಲೆಗಳ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಾಲಕೃಷ್ಣ ರೈ ಸಭೆಗೆ ಮಾಹಿತಿ ಒದಗಿಸಿದರು.
ಅಧ್ಯಕ್ಷತೆ ವಹಿಸಿ‌ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್ ಅವರು, ಗ್ರಾಪಂ ವ್ಯಾಪ್ತಿಯ ನಂಜರಾಯಪಟ್ಟಣ, ಹೊಸಪಟ್ಟಣ, ವಿರೂಪಾಕ್ಷಪುರ ಗ್ರಾಮಗಳಿಗೆ ಪ್ರತ್ಯೇಕವಾಗಿ ಅರಣ್ಯ ಹಕ್ಕು ಸಮಿತಿ ರಚನೆಯಾಗಬೇಕು. ಸಮಿತಿಗಳ ಮೂಲಕ ತ್ವರಿತವಾಗಿ‌ ಕಾರ್ಯಗತಗೊಂಡು ಅಗತ್ಯ ದಾಖಲಾತಿ ಗಳನ್ನು ಸಂಗ್ರಹಿಸಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ‌ ನಿರಂತರ ಸಂಪರ್ಕ ಹೊಂದುವ ಮೂಲಕ ಅರ್ಜಿಯೊಂದಿಗೆ ಮನವಿ ಸಲ್ಲಿಸುವಂತಾಗಬೇಕು ಎಂದರು. ಅಧಿಕಾರಿಗಳು ಕೂಡ ಬಡವರ ಬೇಡಿಕೆಗಳಿಗೆ ಅಗತ್ಯ ಸಹಕಾರ ಒದಗಿಸಿ ಪುಣ್ಯ ಪಡೆದುಕೊಳ್ಳಿ ಎಂದರು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ, ಉಪಾಧ್ಯಕ್ಷೆ ಸಮೀರ, ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷರೂ ಆದ ಗ್ರಾಪಂ ಸದಸ್ಯ ಆರ್.ಕೆ.ಚಂದ್ರ, ಸಮಾಜ‌‌ ಕಲ್ಯಾಣ ಇಲಾಖೆ ಅಧಿಕಾರಿ ಚಂದ್ರಪ್ಪ, ಆರ್ ಎಫ್ ಒ ಶಿವರಾಂ, ಪಿಡಿಒ ರಾಕೇಶ್, ಕಂದಾಯ ಇಲಾಖೆಯ ಅಧಿಕಾರಿಗಳಾದ ಮಧುಸೂದನ್, ಸಂತೋಷ್, ಗ್ರಾಪಂ ಸದಸ್ಯರಾದ ಲೋಕನಾಥ್, ರಕ್ಷಿತ್, ಜಾಜಿ, ರೇಖಾ, ಅರಣ್ಯ ಇಲಾಖೆಯ ಸುಬ್ರಾಯ, ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್, ಗ್ರಾಪಂ ಮಾಜಿ ಸದಸ್ಯ ಸುಮೇಶ್ ಸೇರಿದಂತೆ ಗ್ರಾಮದ ಪ್ರಮುಖರು ಇದ್ದರು.
ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ವಾಸವಿರುವ 100 ಕ್ಕೂ ಅಧಿಕ ಫಲಾನುಭವಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!