ಕುಶಾಲನಗರ: ಅ.18: ಮಂಗಳವಾರ ಕುಶಾಲನಗರದ ಬಾರವಿ ಕಾವೇರಿ ಕನ್ನಡ ಸಂಘದಿಂದ ಸಾರ್ವಜನಿಕರಿಗೆ 10ನೇ ವರ್ಷದ ಕಾವೇರಿ ತೀರ್ಥ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಕೊಪ್ಪ ಕಾವೇರಿ ವೃತ್ತದಲ್ಲಿ ಕಾರ್ಯಕ್ರಮದಲ್ಲಿ ಹಳೆ ಸೇತುವೆ ಮೇಲೆ ಡಾ.ಪುನಿತ್ ರಾಜ್ ಕುಮಾರ್ ಮಹಾದ್ವಾರ ಉದ್ಘಾಟಿಸಲಾಯಿತು. ಕಾವೇರಿ ನದಿಗೆ ಆರತಿ ಬಾಗಿನ ಅರ್ಪಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಕಾವೇರಿ ಮಾತೆಗೆ ಆರತಿ ಬೆಳಗಿ ಮಹಾದ್ವರ ಉದ್ಘಾಟಿಸಿದರು. ಬಾರವಿ ಕನ್ನಡ ಸಂಘದ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್, ಕೊಪ್ಪ ಗ್ರಾಪಂ ಜನಪ್ರತಿನಿಧಿಗಳು, ಮತ್ತಿತರ ಗಣ್ಯರು ಇದ್ದರು.
Back to top button
error: Content is protected !!