ಕಾರ್ಯಕ್ರಮ

ಮಹಾ ಆರತಿ ಬಳಗ- ಚೌಡೇಶ್ವರಿ ದೇವಾಲಯದಿಂದ ಕಾವೇರಿಗೆ‌ ಮಹಾ ಆರತಿ

ಕುಶಾಲನಗರ, ಅ 11: ನದಿ, ಪ್ರಕೃತಿ ಬಗ್ಗೆ ಪ್ರತಿಯೊಬ್ಬರು ಅಗತ್ಯವಾಗಿ ಕಾಳಜಿ ತೋರುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕಾಗಿದೆ ಎಂದು ಶ್ರೀ ಚೌಡೇಶ್ವರಿ ದೇವಾಲಯ ಸಮಿತಿ ಕಾರ್ಯದರ್ಶಿ ಡಿ.ವಿ ರಾಜೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದಲ್ಲಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಚೌಡೇಶ್ವರಿ ದೇವಾಲಯ ಆಡಳಿತ ಮಂಡಳಿ ಸಹಯೋಗದೊಂದಿಗೆ ನಡೆದ 136ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನದಿ ಪರಿಸರದ ಬಗ್ಗೆ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಜಾಗೃತಿ ಮೂಡಿಸುವ ಬಳಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರು, ಅಷ್ಟೋತ್ತರ, ಅರ್ಚನೆ ನಂತರ ಸುರಿಯುತ್ತಿದ್ದ ಮಳೆ ನಡುವೆ ನದಿಗೆ ಸಾಮೂಹಿಕವಾಗಿ ಆರತಿ ಬೆಳಗಲಾಯಿತು. ಚೌಡೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷರಾದ ಸುಲೋಚನಾ ಅವರ ನೇತೃತ್ವದಲ್ಲಿ ಮಹಿಳೆಯರು ನದಿಗೆ ಬಾಗಿನ ಅರ್ಪಿಸಿ, ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷರಾದ ಡಿ.ಟಿ ವಿಜಯೇಂದ್ರ, ಡಿ.ಆರ್. ಸೋಮಶೇಖರ್, ಬಳಗದ ಪ್ರಮುಖರಾದ ಮಂಡೆಪ0ಡ ಬೋಸ್ ಮೊಣ್ಣಪ್ಪ, ಚೈತನ್ಯ ಚಂದ್ರಮೋಹನ್, ಪದ್ಮ ಪುರುಷೋತ್ತಮ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!