ಕುಶಾಲನಗರ, ನ 10: ಕುಶಾಲನಗರದ ಕೋಣ ಮಾರಮ್ಮ ದೇವತೆಯ 24ನೇ ವರ್ಷದ ವಾರ್ಷಿಕ ವಿಶೇಷ ಪೂಜೆಯು ಎರಡು ದಿನಗಳ ಕಾಲ ನಡೆಯಲಿದ್ದು, ಮಂಗಳವಾರದಿಂದ ಪ್ರಾರಂಭವಾಯಿತು. ಮೊದಲ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಗಣಪತಿ ಹೋಮ ಮತ್ತು ಬೆಳಗಿನ 6:45ಯ ಒಳಗೆ ತುಲಾ ಲಗ್ನದಲ್ಲಿ ಮುನ್ನಿಸೋಗೆಯ ಕಾವೇರಿ ನದಿ ಭಾಗದಿಂದ ದೇವಿಯ ವಿಗ್ರಹವನ್ನು ಅಭಿಷೇಕ ಮಾಡಿ, ಕಳಸದ ಜೊತೆಯಲ್ಲಿ ತಂದು ಪ್ರತಿಷ್ಠಾಪಿಸಲಾಯಿತು. ನಂತರ ದೇವಿಯ ಸನ್ನಿಧಿಯಲ್ಲಿ ಗಣಪತಿ ಹೋಮ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು. ಸಾವಿರಾರು ಸಂಖ್ಯೆಯ ಭಕ್ತರು ಭಕ್ತಿ ಶ್ರದ್ಧೆಯಿಂದ.. ಬೆಳಗಿನಿಂದ ಸರದಿ ಸಾಲುಗಳಲ್ಲಿ ನಿಂತು ದೇವಿಯ ದರ್ಶನ ಪಡೆದರು.ಭಕ್ತಿ ಮತ್ತು ಶ್ರದ್ದೆಯಿಂದ ನಡೆದ ಪೂಜಾ ಕಾರ್ಯದಲ್ಲಿ ಮಾಜಿ ಸಚಿವರು, ಹಾಗೂ ಮಾಜಿ ಶಾಸಕರಾದ ಎಂಪಿ ಅಪ್ಪಚ್ಚು ರಂಜನ್ ಭಾಗವಹಿಸಿದ್ದರು.
ಸಂಜೆ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಭಕ್ತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕೋಣ ಮಾರಮ್ಮ ಊರದೇವತೆಯ ಸಮಿತಿಯ ಅಧ್ಯಕ್ಷರಾದ ಮಂಜುನಾಥ್, ಉಪಾಧ್ಯಕ್ಷರಾದ ಲೋಕೇಶ್, ಖಜಾಂಜಿಗಳಾದ ಸುರೇಶ್, ಕಾರ್ಯದರ್ಶಿ ಪುರಸಭೆಯ ಮಾಜಿ ಸದಸ್ಯ ಸುರೇಶ್, ಸಹ ಕಾರ್ಯದರ್ಶಿ ರಮೇಶ್, ಹಿರಿಯ ಸದಸ್ಯರಾದ ಚೆಲುವರಾಜು, ಶಿವಾನಂದ, ಜಯವರ್ಧನ, ಮಂಜುನಾಥ್, ಕೆ. ಸಿ. ನಂಜುಂಡಸ್ವಾಮಿ, ತಮ್ಮಯ್ಯ, ಸತೀಶ್ ಎಸ್ ಕೆ ರಾಜು, ಸತೀಶ್, ಪುರೋಹಿತ ಲೋಕೇಶ್, ಮತ್ತು ಕಲಾವಿದ ರಾಜು ಪೂಜಾ ಕಾರ್ಯಗಳಲ್ಲಿ ಭಾಗವಹಿಸಿದ್ದರು.
Back to top button
error: Content is protected !!