ಕುಶಾಲನಗರ, ಅ 05: ಕುಶಾಲನಗರ ತಾಲ್ಲೂಕು ಶ್ರೀ ವಿಶ್ವಕರ್ಮ ಸಮಾಜದ ವತಿಯಿಂದ 23ನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಹಾಗೂ ದುರ್ಗಾ ನಮಸ್ಕಾರ ಪೂಜೆ ಪ್ರತಿಭಾ ಪುರಸ್ಕಾರ ಮತ್ತು ವಾರ್ಷಿಕ ಮಹಾಸಭೆ ಸಮಾರಂಭ ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು
ಭಗವಾನ್ ಶ್ರೀ ವಿಶ್ವಕರ್ಮ ಹಾಗೂ ಶಕ್ತಿ ಸ್ವರೂಪಿಣಿ ಶ್ರೀ ದುರ್ಗಾದೇವಿಯ ದೈವಿಕ ಕೃಪೆಗೆ ಮತ್ತು ಸಮೃದ್ಧಿಗಾಗಿ ವಿಶೇಷ ಪೂಜಾ ವಿಧಿ-ವಿಧಾನ ಗಳನ್ನು ಪುರೋಹಿತರಾದ ರಾಜೇಶ್ ಆಚಾರ್ಯ ಮತ್ತು ರಾಮಸ್ವಾಮಿ ಆಚಾರ್ಯರ ನೇತೃತ್ವದಲ್ಲಿ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು.
ಶನಿವಾರ ಮಹಿಳಾ ಘಟಕದ ವತಿಯಿಂದ ನಡೆದ ದುರ್ಗಾ ನಮಸ್ಕಾರ ಪೂಜೆ ಕುಂಕುಮಾರ್ಚನೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ರವರು ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಹೆಬ್ಬಾಲೆಯಲ್ಲಿರುವ ನಂಬರ್ 562ನೇ ಶ್ರೀ ಕಾಳಿಕಾಂಬ ವಿಶ್ವಕರ್ಮ ಕರಕುಶಲ ಕೈಗಾರಿಕಾ ಸಹಕಾರ ಸಂಘಕ್ಕೆ ಸರ್ಕಾರದ ವತಿಯಿಂದ ಸಮುದಾಯ ಭವನಕ್ಕಾಗಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಧನಸಹಾಯ ಒದಗಿಸಿಕೊಡುವುದಾಗಿ ಭರವಸೆ. ನೀಡಿದರು. ಕುಶಾಲನಗರ ತಾಲೂಕು ವಿಶ್ವಕರ್ಮ ಸಮಾಜದ ನಿವೇಶನದ ಖಾತೆಗಾಗಿ ಸಹಕರಿಸುವುದಾಗಿ ಭರವಸೆ ನೀಡಿದರು. ಮಾನ್ಯ ಶಾಸಕರನ್ನು ಆಡಳಿತ ಮಂಡಳಿಯ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀ ಸುಜ್ಞಾನ ಮೂರ್ತಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎರಡು ದಿನ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಅನ್ನ ಅನ್ನಸಂತರ್ಪಣೆ ವ್ಯವಸ್ಥೆಯನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರಾದ ದಿವಂಗತ ಎಚ್.ಎಂ. ವಿರಾಚಾರ್ ಮತ್ತು ದಿವಂಗತ ಶಾರದಮ್ಮನವರ ಜ್ಞಾಪಕರ್ತವಾಗಿ ಅವರ ಮಕ್ಕಳಾದ ಸೋಮಶೇಖರ್ ಹೆಚ್. ವಿ, ಮಂಜುನಾಥ್ ಹೆಚ್. ವಿ ಮತ್ತು ಹೆಚ್. ವಿ ಕಿಶೋರ್ ಕುಮಾರ್ ರವರು ಮತ್ತು ಅವರ ಕುಟುಂಬ ವರ್ಗದವರು ಏರ್ಪಡಿಸಿದ್ದರು. ಅವರಿಗೆ ತಾಲೂಕು ವಿಶ್ವಕರ್ಮ ಸಮಾಜದ ಪರವಾಗಿ ಗೌರವ ಪೂರ್ವಕವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು. ಭಾನುವಾರ ನಡೆದ ಧಾರ್ಮಿಕ ಸಭೆಯ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು
ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ವಿಶ್ವಬ್ರಾಹ್ಮಣ ಮಹಾ ಸಂಸ್ಥಾನ ಮಠ ಅರೇಮಾದನಹಳ್ಳಿ, ಗುರುಗಳು ವಹಿಸಿ ಆಶೀರ್ವಚನ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ದುರ್ಗೇಶ್ ಸಿ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ಪಿ ನೆರವೇರಿಸಿದರು. ನಂತರ ಮಾತನಾಡಿದ ಅವರು, ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದಲ್ಲಿ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುವುದರ ಜೊತೆಗೆ ಸದಾಕಾಲ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು ಹಾಗೂ ಮಹಿಳೆಯರಿಗಾಗಿ ಹೆಚ್ಚಿನ ಬೇಡಿಕೆ ಇರುವ ನೂತನ ಹೊಲಿಗೆ ಯಂತ್ರ ಯೋಜನೆಯನ್ನು2026 ರಲ್ಲಿ ಜಾರಿಗೆ ತರುವುದಾಗಿ ಭರವಸೆ ನೀಡಿದರು. ಈ ಕಾರ್ಯಕ್ರಮದ ಪ್ರಧಾನ ಭಾಷಣಕಾರರಾಗಿ ಶ್ರೀ ಪ್ರಶಾಂತ್ ಎಂ ಸಿ. ಸಹಾಯಕ ನಿರ್ದೇಶಕರು, ಶಿಕ್ಷಣ ಇಲಾಖೆ ಪಿರಿಯಾಪಟ್ಟಣ, ಹಾಗೂ ಶ್ರೀ ಕೆ ಎಸ್ ಶಾಸ್ತ್ರಿ ದೈಹಿಕ ಶಿಕ್ಷಕರು. ಬೆಂಗಳೂರು ಇವರು ವಿಶ್ವಕರ್ಮ ಪೂಜಾ ಮಹೋತ್ಸವದ ಬಗ್ಗೆ ಹಾಗೂ ಜಯಂತಿಯ ಬಗ್ಗೆ ಉಪನ್ಯಾಸವನ್ನು ನೀಡಿದರು ನಂತರ ಕಾರ್ಯಕ್ರಮದಲ್ಲಿ 2025 ನೇ ಸಾಲಿನಲ್ಲಿ ಅನ್ನಸಂ ತಪರ್ಪಣೆ ವ್ಯವಸ್ಥೆ ಮಾಡಿದ ಹೆಚ್.ಎನ್. ದಕ್ಷಿಣ ಮೂರ್ತಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು ಮತ್ತು 2025 -26 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ತೇರ್ಗಡೆ ಹೊಂದಿದ ಸಮಾಜದ ವಿವಿಧ ವಿದ್ಯಾರ್ಥಿಗಳನ್ನು ತಾಲೂಕು ವಿಶ್ವಕರ್ಮ ಸಮಾ ಸಮಾಜ ಯುವ ಘಟಕ ಹಾಗೂ ಹಾಗೂ ಹೆಚ್.ಎನ್ ಸುಬ್ರಹ್ಮಣ್ಯ ಮತ್ತು ಕಾಂತಾಮಣಿಯವರು ನೀಡಿದ ದತ್ತಿನಿದಿಯಿಂದ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿ.ಪಿ. ಶಶಿಧರ್ ಅಧ್ಯಕ್ಷರು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನ ಅನುಷ್ಠಾನ ಸಮಿತಿ ಕುಶಾಲನಗರ ಇವರು ಭಾಗವಹಿಸಿ ತಾಲೂಕು ವಿಶ್ವಕರ್ಮ ಸಮಾಜ ಹೇಗೆ ಬೆಳೆದು ಬಂದಿತು ಅದರಲ್ಲಿ ಆಡಳಿತ ಮಂಡಳಿಯ ಸದಸ್ಯರು ಹೇಗೆ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದರು ಹಾಗೂ ಅವರ ಅಭಿವೃದ್ಧಿಗೆ ತಾನು ಸದಾಕಾಲ ಶ್ರಮಿಸುವುದಾಗಿ ಭರವಸೆ ನೀಡಿದರು ಈ ವೇದಿಕೆಯ ಕಾರ್ಯಕ್ರಮದಲ್ಲಿ ಕೆ.ಎಸ್ ಚಂದ್ರಶೇಖರ್ ಕಾನೂನು ಸಲಹೆಗಾರರು ರಾಜ್ಯ ವಿಶ್ವಕರ್ಮ ಸಮಾಜ , ಎಚ್ ಬಿ ಲಿಂಗಮೂರ್ತಿ ನಿವೃತ್ತ ಪ್ರಾಂಶುಪಾಲರು ಹಾಗೂ ನಿಕಟ ಪೂರ್ವ ಅಧ್ಯಕ್ಷರು ತಾಲೂಕು ವಿಶ್ವಕರ್ಮ ಸಮಾಜ ಕುಶಾಲನಗರ, ವಿ ಕುಮಾರ್ ಗೌರವಾಧ್ಯಕ್ಷರು, ಲಲಿತ ವರದ ರಾಜ್ ಮಹಿಳಾ ಘಟಕದ ಅಧ್ಯಕ್ಷರು, ಡಿ ಪುನೀತ್ ಯುವ ಘಟಕದ ಅಧ್ಯಕ್ಷರು, ಜಗದೀಶ್ ಮಡಿಕೇರಿ, ನೀಲಕಂಠ ಅಧ್ಯಕ್ಷರು ತಾಲೂಕು ವಿಶ್ವಕರ್ಮ ಸಮಾಜ ಪಿರಿಯಾಪಟ್ಟಣ, ಅಣ್ಣಯ್ಯ ಚಾರ್ ಗೌರವಾಧ್ಯಕ್ಷರು ಪಿರಿಯಾಪಟ್ಟಣ, ಬಿ ಬಿ ನಾಗರಾಜು ಶನಿವಾರ ಸಂತೆ, ಹೆಚ್.ಎನ್. ಸದಾನಂದ, ಟಿ.ಎಸ್. ಪ್ರಕಾಶಾಚಾರಿ ಹೆಚ್ ಎನ್ ನಾಗಾಚಾರಿ, ಎಚ್ ಬಿ ರಾಜಮೂರ್ತಿ, ಹೆಚ್ಎನ್ ಸುಬ್ರಹ್ಮಣ್ಯ ಸಮಾಜದ ಪ್ರಮುಖರು ತಾಲೂಕು ವಿಶ್ವಕರ್ಮ ಸಮಾಜದ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳು ಮಹಿಳಾ ಘಟಕದ ಸದಸ್ಯರು ಯುವ ಘಟಕದ ಪದಾಧಿಕಾರಿಗಳು ಹಾಗೂ ಕುಶಾಲನಗರ ತಾಲೂಕಿನ ವಿವಿಧ ಗ್ರಾಮಗಳ ಮುಖಂಡರುಗಳು ಹಾಗೂ ಕುಲಬಾಂಧವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಹೆಚ್ಎನ್ ದಿನೇಶ್ ಕುಮಾರ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು ಹಾಗೂ ಶ್ರೀನಿವಾಸರವರು ಮ್ಯೂಸಿಕ್ ಆರ್ಕೆಸ್ಟ್ರಾ ಹುಣಸೂರು ಇವರು ರಸಮಂಜರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು .