ಆತ್ಮಹತ್ಯೆ

ಕೇರಳ ಮೂಲದ ವ್ಯಕ್ತಿ‌ ಅನುಮಾನಾಸ್ಪದ ರೀತಿಯಲ್ಲಿ ಸಾವು

ಕುಶಾಲನಗರ, ಅ 05: 7ನೇ ಹೊಸಕೋಟೆಯಲ್ಲಿ ಕೇರಳ ಮೂಲದ ವ್ಯಕ್ತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪಳ್ಳಿ ಮುಂಭಾಗದ ಸೀಬೆ ಮರಕ್ಕೆ‌ ನೇಣು ಹಾಕಿದ ರೀತಿಯಲ್ಲಿ ಮೃತದೇಹ ಗೋಚರವಾಗಿದೆ. ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕಣ್ಣೂರಿನ ವಿಷ್ಣು ಎನ್ನುವ ಈ ವ್ಯಕ್ತಿ ಇತರೆ ಕೆಲವೊಂದಿಗೆ ವಾಸವಾಗಿದ್ದರು ಎನ್ನಲಾಗಿದೆ. ನಿನ್ನೆ ರಾತ್ರಿ‌ ಬಾರ್ ಒಂದರ ಬಳಿ ಕಲಹ ನಡೆದಿದ್ದು
ಈತನ ಜೊತೆಯಲ್ಲಿದ್ದವರು ಇದೀಗ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ‌ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!