ಅವ್ಯವಸ್ಥೆ

ಹದಗೆಟ್ಟಿರುವ ಕಂಬಿಬಾಣೆ-ಚಿಕ್ಲಿಹೊಳೆ ಸಂಪರ್ಕ ರಸ್ತೆ

ಕುಶಾಲನಗರ, ಅ 04: 7ನೇ ಹೊಸಕೋಟೆ ಗ್ರಾಪಂ ವ್ಯಾಪ್ತಿಯ ಕಂಬಿಬಾಣೆಯಿಂದ ಚಿಕ್ಲಿಹೊಳೆ ಸಂಪರ್ಕ ರಸ್ತೆ ತೀರಾ ಹದಗೆಟ್ಟು ಸಂಪೂರ್ಣ ಗುಂಡಿಮಯವಾಗಿ ಸಂಚಾರ ದುಸ್ಥರವಾಗಿದೆ.

ಕಾವೇರಿ ನೀರಾವರಿ ನಿಗಮಕ್ಕೆ‌ ಒಳಪಡುವ ಈ ರಸ್ತೆಯಲ್ಲಿ ಬೃಹತ್ ಹೊಂಡಗಳು ನಿರ್ಮಾಣಗೊಂಡಿವೆ. ಹೊಂಡಗಳಲ್ಲಿ ಮಳೆ‌ನೀರು ನಿಂತು ಕೆಸರುಮಯವಾಗಿರುವ ಕಾರಣ ಕಾಲ್ನಡಿಗೆ ಸಂಚಾರಕ್ಕೂ ಅಯೋಗ್ಯವಾಗಿದೆ ಎಂದು‌ ಜಿಲ್ಲಾ ದಿಶಾ ಸಮಿತಿ ಸದಸ್ಯ ಆರ್.ಕೆ.ಚಂದ್ರ ಆರೋಪಿಸಿದ್ದಾರೆ. ಚಿಕ್ಲಿಹೊಳೆ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಇದೇ ಮಾರ್ಗದಲ್ಲಿ ಹೆಚ್ಚು ಸಂಚರಿಸುತ್ತಾರೆ, ಅಲ್ಲದೆ ಕಂಬಿಬಾಣೆ, ಕಟ್ಟೆಹಾಡಿ ಗಿರಿಜನ ಹಾಡಿ ಜನರು ಕೂಡ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಒಟ್ಟಾರೆ ಈ‌ ಭಾಗದಲ್ಲಿ 2000 ಕ್ಕೂ ಅಧಿಕ ಮಂದಿ‌ ನೆಲೆಸಿದ್ದು ಎಲ್ಲರೂ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಗುಡ್ಡೆಹೊಸೂರು-ಸಿದ್ದಾಪುರ ನಡುವಿನ ಬಾಳುಗೋಡು‌ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಈಗಾಗಲೆ ಶಾಸಕರು ಚಾಲನೆ ನೀಡಿದ್ದಾರೆ. ಕಾಮಗಾರಿ ಆರಂಭಗೊಂಡರೆ ಎಲ್ಲಾ ವಾಹನಗಳು ಈ ಮಾರ್ಗವಾಗಿ ಸಂಚರಿಸಬೇಕಾಗುತ್ತದೆ. ಆ ಸಂದರ್ಭ ವಾಹನ ದಟ್ಟಣೆಯಿಂದ ಅಪಘಾತ ಸಂಭವಿಸುವ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ. ಕೂಡಲೆ ನಿಗಮದವರು ಈ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!