ಸುಂಟಿಕೊಪ್ಪ, ಅ 04: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕುಶಾಲನಗರ ತಾಲೂಕು ಸುಂಟಿಕೊಪ್ಪ ಹೋಬಳಿ ಘಟಕ ಹಾಗೂ ಸುಂಟಿಕೊಪ್ಪ ನಗರ ಘಟಕದ ಪದಾಧಿಕಾರಿಗಳ ಆಯ್ಕೆ ಮತ್ತು ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮವು ಕೊಡಗು ಜಿಲ್ಲಾಧ್ಯಕ್ಷರಾದ ದೀಪಕ್ ಕನ್ನಡಿಗ ಅವರ ಮಾರ್ಗದರ್ಶನದಲ್ಲಿ ಸುಂಟಿಕೊಪ್ಪ ನಗರದ ಪ್ರವಾಸಿ ಮಂದಿರದಲ್ಲಿ ನಡೆಯಿತು.
ಹೋಬಳಿ ಅಧ್ಯಕ್ಷರಾದ ಪವನ್ ಪಾಂಡುರಂಗ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಕಾರ್ಯಕ್ರಮದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಆನಂದ್ ಹಾಗೂ ಕುಶಾಲನಗರ ತಾಲೂಕು ಅಧ್ಯಕ್ಷರಾದ ಆಸೀಫ್ ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆ ಕಳೆದ 25 ವರ್ಷಗಳಿಂದ ನಾಡು–ನುಡಿಯ ಪರವಾಗಿ ನಿರಂತರವಾಗಿ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹೋಬಳಿ ಹಾಗೂ ಗ್ರಾಮ ಘಟಕಗಳು ಸದೃಢವಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ವಸಂತ್ ಆಚಾರ್ಯ, ತಾಲೂಕು ಮಹಿಳಾ ಅಧ್ಯಕ್ಷರಾದ ಶಶಿಕಲಾ, ಕುಶಾಲನಗರ ನಗರ ಘಟಕದ ಅಧ್ಯಕ್ಷರಾದ ಯೋಗೇಶ್, ಯುವ ಘಟಕದ ಅಧ್ಯಕ್ಷರಾದ ಪುನೀತ್, ಪದಾಧಿಕಾರಿಗಳಾದ ಜೈ ಸ್ವಾಮಿ, ನಂಜಪ್ಪ, ಮುರುಳಿ ಹಾಗೂ ಕವಿತಾ ಹೇಮಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕೊಡಗು ಜಿಲ್ಲಾ ಕಾರ್ಯಾಧ್ಯಕ್ಷರಾದ ಕೆ.ಪಿ. ರವೀಶ್ ಅವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.
ಸುಂಟಿಕೊಪ್ಪ ಹೋಬಳಿ ಘಟಕದ ನೂತನ ಪದಾಧಿಕಾರಿಗಳು
ಅಧ್ಯಕ್ಷರು: ಪವನ್ ಪಾಂಡುರಂಗ
ಉಪಾಧ್ಯಕ್ಷರು: ಅಶ್ವಥ್ ಪೂಜಾರಿ
ಪ್ರಧಾನ ಕಾರ್ಯದರ್ಶಿ: ದೀಪು
ಕಾರ್ಯದರ್ಶಿ: ಶ್ರೀನಿವಾಸ್
ಸಂಘಟನಾ ಕಾರ್ಯದರ್ಶಿ: ಮುರುಗ
ಸಹ ಕಾರ್ಯದರ್ಶಿ: ಅಭಿ
ಸಂಚಾಲಕರು: ಶ್ರೀಧರ್
ಸುಂಟಿಕೊಪ್ಪ ನಗರ ಘಟಕದ ನೂತನ ಪದಾಧಿಕಾರಿಗಳು
ಅಧ್ಯಕ್ಷರು: ಪ್ರದೀಪ್ ಪೂಜಾರಿ
ಉಪಾಧ್ಯಕ್ಷರು: ಹರೀಶ್
ಪ್ರಧಾನ ಕಾರ್ಯದರ್ಶಿ: ಪೃಥ್ವಿ ಎಂ
ಕಾರ್ಯದರ್ಶಿ: ಚಂದ್ರ ಪೂಜಾರಿ
ಸಹ ಕಾರ್ಯದರ್ಶಿ: ಪ್ರಜ್ವಲ್ ರೈ
ಸಂಚಾಲಕರು: ಮಿಥುನ್
ಸಂಘಟನಾ ಕಾರ್ಯದರ್ಶಿ: ನಿಶಾಂತ್
ಇದೇ ಸಂದರ್ಭದಲ್ಲಿ ಕೆದಕಲ್–ಹೊರೂರು ಗ್ರಾಮ ಘಟಕದ ಅಧ್ಯಕ್ಷರಾಗಿ ಸಮೀರ್ ಅವರನ್ನು ಆಯ್ಕೆ ಮಾಡಲಾಯಿತು.
ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಗಣ್ಯರು ಅಭಿನಂದನೆ ಸಲ್ಲಿಸಿದರು. ಸಂಘಟನೆಯ ತತ್ವ–ಸಿದ್ಧಾಂತಗಳಿಗೆ ಬದ್ಧರಾಗಿ ನಾಡು, ನುಡಿ, ನೆಲ ಹಾಗೂ ಜಲದ ರಕ್ಷಣೆಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
Back to top button
error: Content is protected !!