ಅಪಘಾತ
ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ: ವಿದ್ಯುತ್ ಪೂರೈಕೆ ಸ್ಥಗಿತ

ಕುಶಾಲನಗರ, ಸೆ 28: ಪ್ರವಾಸಿ ಬಸ್ ಡಿಕ್ಕಿಯಾಗಿ 11 ಕೆವಿ ವಿದ್ಯುತ್ ಕಂಬ ಮುರಿದ ಘಟನೆ ಕುಶಾಲನಗರ ಟಾಟಾ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ತಮಿಳುನಾಡು ಮೂಲದ ಟೂರಿಸ್ಟ್ ಬಸ್ ನಲ್ಲಿ ಪ್ರವಾಸಿಗರಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ನಿಲ್ಲಿಸಿದ್ದ ಬಸ್ ನೊಳಗಿನಿಂದ ಪ್ರವಾಸಿಗನೊಬ್ಬ ಹಾಂಡ್ ಬ್ರೇಕ್ ರಿಲೀಸ್ ಮಾಡಿದ ಹಿನ್ನೆಲೆಯಲ್ಲಿ ಉಂಟಾದ ಅವಘಡದಿಂದ ಕುಶಾಲನಗರದಲ್ಲಿ ಕೆಲವು ಕಡೆ ವಿದ್ಯುತ್ ಪೂರೈಕೆ ಸ್ಥಗೊತಗೊಂಡಿದೆ.



