ಸಭೆ

ಕುಶಾಲನಗರದ ನಂ.122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 105ನೇ ವಾರ್ಷಿಕ ಮಹಾಸಭೆ

ಕುಶಾಲನಗರ, ಸೆ 20: ಕುಶಾಲನಗರದ ನಂ. 122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ 105ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಅವರ ಅಧ್ಯಕ್ಷತೆಯಲ್ಲಿ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿ‌ ಮಾತನಾಡಿದ ಟಿ.ಆರ್.ಶರವಣಕುಮಾರ್ ಅವರು,
2025-26ನೇ ಸಾಲಿನಲ್ಲಿ ರೂ 1 ಕೋಟಿ 11 ಲಕ್ಷದ 87 ಸಾವಿರ (1,11,87,757) ನಿವ್ವಳ ಲಾಭಗಳಿಸಿದೆ. 105 ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಸಂಘ ಸತತವಾಗಿ 9 ವರ್ಷಗಳಿಂದ ಕೋಟಿಗೂ ಮೀರಿ ಲಾಭಗಳಿಸುತ್ತಾ ಬಂದಿದೆ. ಸಂಘವು ಕಳೆದ 35 ವರ್ಷಗಳಿಂದಲೂ ಸತತವಾಗಿ ಲಾಭದಲ್ಲಿ ಮುನ್ನಡೆಯುತ್ತಿದ್ದು, ಸದಸ್ಯರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿರುತ್ತೇವೆ. ಸದಸ್ಯರಿಗೆ ಕಳೆದ 15 ವರ್ಷಗಳಿಂದ ಶೇ.16 ರಿಂದ ಶೇ.25 ಡಿವಿಡೆಂಡ್ ನೀಡುತ್ತಿದ್ದು, ಸಂಘದ ‘ಎ’ ತರಗತಿ ಮತ್ತು ನಾಮಮಾತ್ರ ಸದಸ್ಯರಿಗೆ ಪ್ರತಿ ದಿನ 25 ರೀತಿಯ ವಿವಿಧ ಸಾಲಗಳನ್ನು ಶೀಘ್ರದಲ್ಲಿ ನೀಡುವ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ.
ಸಂಘವು ಶತಮಾನೋತ್ಸವ ಸವಿ ನೆನಪಿಗಾಗಿ ಶತಮಾನೋತ್ಸವ ಭವನ ಸಂಕೀರ್ಣ ನಿರ್ಮಾಣ ಮಾಡಲು ಗುಡ್ಡೆಹೊಸೂರಿನಲ್ಲಿ 2 ಎಕರೆ ನಿವೇಶನದಲ್ಲಿ ಕೈಗೊಂಡಿರುವ ಶತಮಾನೋತ್ಸವ ಭವನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು ಮುಗಿಯುವ ಹಂತಕ್ಕೆ ಬಂದಿದೆ. ಮುಂದಿನ 2027ರ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ಸಾಧ್ಯವಾದಲ್ಲಿ‌ ಮುಖ್ಯಮಂತ್ರಿಗಳ‌ ಮೂಲಕ ಉದ್ಘಾಟನೆಗೆ ಚಿಂತನೆ ಹೊಂದಲಾಗಿದೆ. ಸಂಘಕ್ಕೆ ಹೆಚ್ಚಿನ ಸಿಬ್ಬಂದಿಗಳ ಅವಶ್ಯಕತೆಯಿದ್ದು ಈ‌ ನಿಟ್ಟಿನಲ್ಲಿ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ
ಮರಣ ನಿಧಿ ಹೆಚ್ಚಳ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಘದ ಸದಸ್ಯರ‌ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಕೆ.ವಿ.ನೇತ್ರಾವತಿ, ನಿರ್ದೇಶಕರಾದ ವಿ.ಎಸ್.ಆನಂದಕುಮಾರ್, ಕೆ.ಎನ್.ದೇವರಾಜ್, ಎಂ
ಎಂ.ಚರಣ್, ಪಿ.ಬಿ.ಯತೀಶ್, ಪಿ.ಎಂ.ಕವಿತಾ, ಎಂ.ಎಸ್.ರಾಜೇಶ್, ಹೆಚ್.ಎಂ.ಮಧುಸೂದನ್, ಕೆ.ಜಿ.ಮನು, ಪ್ರಸನ್ನ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಲೋಕೇಶ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!