ಸುಂಟಿಕೊಪ್ಪ- 15: ಸುಂಟಿಕೊಪ್ಪದಲ್ಲಿ ಭಾನುವಾರ ವಾರದ ಸಂತೆಗೆಂದು ತರಕಾರಿ ದಿನಸಿ ಸಾಮಾನುಗಳನ್ನು ಹೊತ್ತು ತಂದ ಮಿನಿಲಾರಿ , ಪಿಕ್ ಅಪ್, ಒಮ್ನಿ ವಾಹನಗಳನ್ನು ಉಲುಗುಲಿ ರಸ್ತೆಯ ಬಂಡಿ ಮಾಲದಲ್ಲಿ ನಿಲ್ಲಿಸಲಾಗಿತ್ತು. ವಾಹನದ ಮಾಲಿಕರು ಸಂತೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಸಂದರ್ಭ ಲಾಕ್ ಮಾಡಲಾಗಿದ್ದ ಸುಮಾರು 12 ವಾಹನಗಳ ಗಾಜುಗಳನ್ನು ಒಡೆದ ಕಿಡಿಗೇಡಿಗಳು ಒಳಗಿದ್ದ ಲಾಕರ್ ಗಳನ್ನು ಓಪನ್ ಮಾಡಿದ್ದಾರೆ. ಹಾಡುಹಗಲೇ ಈ ಘಟನೆ ನಡೆದಿದ್ದು ಹೊರ ಊರುಗಳಿಂದ ಆಗಮಿಸಿದ ಪ್ಯಾಪಾರಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸುಂಟಿಕೊಪ್ಪ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.(ಬಿ.ಕೆ.ಎಸ್)
Back to top button
error: Content is protected !!