ಆರೋಪ
ಶೂ ವಿತರಣೆಯಲ್ಲಿ ಭ್ರಷ್ಟಾಚಾರ ಆರೋಪ: ಕೊಡಗು ಜಿಲ್ಲಾ ಶಿಕ್ಷಣಾಧಿಕಾರಿಗಳ ವಿರುದ್ದ ದೂರು ದಾಖಲು


ಕುಶಾಲನಗರ, ಸೆ 10: ಕರ್ನಾಟಕ ರಾಜ್ಯದ ವಿವಿಧ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಸ್ತುತ ಸಾಲಿನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಿರುವ ಶೂಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಶೂ ಬಳಸಿದ ಒಂದೇ ವಾರದಲ್ಲಿ ಹರಿದಿರುವುದು ಅಥವಾ ಶೂ ಹಾಕಿದ ಕೆಲವೇ ನಿಮಿಷಗಳಲ್ಲಿ ಹೊಲಿಗೆ ಕಿತ್ತುಬರುವುದು ಕಂಡುಬಂದಿರುತ್ತದೆ ಎಂದು ವರದಿ ಮಾಡಲಾಗಿತ್ತು. ಇದಲ್ಲದೇ, ಕಳೆದ ವರ್ಷಕ್ಕಿಂತ ಈ ವರ್ಷ ವಿತರಿಸಿರುವ ಶೂಗಳು ಕಳಪೆಯಾಗಿದ್ದು, ಇದರಲ್ಲಿ ಭ್ರಷ್ಟಾಚಾರವೂ ಸಹ ನಡೆದಿರುವ ಆರೋಪ ಮಾಡಲಾಗಿತ್ತು. ಸದರಿ ವಿಷಯವು ಶಾಲಾ ಮಕ್ಕಳ ಮೂಲಭೂತ ಸೌಕರ್ಯ ಒದಗಿಸುವ ವಿಚಾರವಾಗಿ ಇದ್ದು, ಭಾರತ ಸಂವಿಧಾನದ ೨೧ಎ ವಿಧಿಯ ಉಲ್ಲಂಘನೆಯಾಗುತ್ತಿರುವುದು ಹಾಗೂ ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ.