ಕಾರ್ಯಕ್ರಮ

ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ದೂರದೃಷ್ಟಿ ಯೋಜನೆಯ ತರಬೇತಿ ಕಾರ್ಯಾಗಾರ

ಕೂಡಿಗೆ, ಸೆ. 7: ಕರ್ನಾಟಕ ರಾಜ್ಯ ಜೀವನೋಪಾಯ ಸಂರ್ವಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ ,ಉದ್ಯಮ ಶೀಲತೆ, ಜೀವನೋಪಾಯ ಇಲಾಖೆ, ಸಂಜೀವಿನಿ ಒಕ್ಕೂಟ, ಕೂಡಿಗೆ ಗ್ರಾಮ ಪಂಚಾಯತಿ ಇವರ ಸಹಯೋಗದೊಂದಿಗೆ ಕೂಡಿಗೆ ಗ್ರಾಮ ಪಂಚಾಯತಿ ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ದೂರದೃಷ್ಟಿ ಯೋಜನೆಯ ತರಬೇತಿ ಕಾರ್ಯಾಗಾರವು ಕೂಡಿಗೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡಿಗೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಕಲ್ಪನಾ ವಹಿಸಿ ನಂತರ ಮಾತಾನಾಡುತ್ತಾ ಒಕ್ಕೂಟದ ಸದಸ್ಯರಿಗೆ ತರಬೇತಿ ನೀಡುವ ಮೂಲಕ ಮಹಿಳೆಯರು ಸ್ವಾವಲಂಬಿರಾಗಿ ಬದುಕು ಕಟ್ಟಿಕೊಂಡು ,ಅರ್ಥಿಕವಾಗಿ ಮುಂದುವರಿಯಲು, ಮತ್ತು ವಿವಿಧ ಸಾಲ ಸೌಲಭ್ಯಗಳನ್ನು ಪಡೆದ ಸ್ವ ಉದ್ಯೋಗಿಗಳಾಗಲು , ಅಲ್ಲದೆ ಕೃಷಿ ಇಲಾಖೆ ವತಿಯಿಂದ ಸಿಗುವ ಸವಲತ್ತುಗಳನ್ನು ಮಹಿಳಾ ರೈತರು ಸದುಪಯೋಗ ಪಡಿಸಿಕೊಳ್ಳಲು ಇಂತಹ ತರಬೇತಿಗಳು ಬಹು ಮುಖ್ಯ ಎಂದರು.
ತರಬೇತಿ ಕಾರ್ಯಾಗಾರದಲ್ಲಿ ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಯ ಅಧಿಕಾರಿ ವರ್ಗದವರು, ಮತ್ತು ಕುಶಾಲನಗರ ರೈತ‌ ಸಂಪರ್ಕ ಕೇಂದ್ರ ಅಧಿಕಾರಿ ವರ್ಗದವರು ತಮ್ಮ ತಮ್ಮ ಇಲಾಖೆ ಯೋಜನೆ, ಮತ್ತು ಅದರ ಸದುಪಯೋಗ, ಮಹಿಳಾ ‌ಕಾನೂನಿನ ಅರಿವು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಸದಸ್ಯರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಂಜೀವಿನಿ ಒಕ್ಕೂಟದ ಆಡಳಿತ ಮಂಡಳಿ, ಮತ್ತು ಸದಸ್ಯರು,ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿ ವರ್ಗದವರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!