ಕುಶಾಲನಗರ, ಅ 17: 1ನೇ ಕರ್ನಾಟಕ ಬ್ಯಾಂಡಿ ಶಿಬಿರವು ಅಕ್ಟೋಬರ್ 14 ಮತ್ತು 15 ರಂದು ದೆಹಲಿಯ ಆಂಬಿಯನ್ಸ್ ಮಾಲ್ I-ಸ್ಕೇಟ್ ರಿಂಕ್ನಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಶಿಬಿರದ ಅತ್ಯಂತ ಗಮನಾರ್ಹ ಅಂಶವೆಂದರೆ, ಭಾಗವಹಿಸಿದ್ದ ಬಹುತೇಕ ಕ್ರೀಡಾಪಟುಗಳು ಕೊಡಗಿನವರು ಎಂಬುದು ವಿಶೇಷವಾಗಿದ್ದು, ಕರ್ನಾಟಕ ರಾಜ್ಯವನ್ನು ಬ್ಯಾಂಡಿ ಕ್ರೀಡೆಯನ್ನು ರಾಷ್ಟ್ರ ಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ರಾಜ್ಯದ ಕೀರ್ತಿ ಪಥಾಕೆಯನ್ನು ಎತ್ತಿ ಇಡಿಯುತ್ತಿದ್ದು ಎಮ್ಮೆಯ ವಿಷಯವಾಗಿದೆ. ವಿಶೇಷವೆಂದರೆ ಶೇಕಡ 90% ಕೊಡಗು ಜಿಲ್ಲೆಯ ಕ್ರೀಡಾ ಪಟುಗಳು ಭಾಗವಹಿಸಿದ್ದು ಜಿಲ್ಲೆಯ ನಾಗರಿಕರಲ್ಲಿ ಸಂತೋಷ ತಂದಿದೆ.
ಕರ್ನಾಟಕ ಬ್ಯಾಂಡಿ ತರಬೇತುದಾರ ಅನೂಪ್ ಡಿಸೋಜಾ ಅವರ ಮಾರ್ಗದರ್ಶನದಲ್ಲಿ, ಸ್ಕೇಟರ್ಗಳು ಐಸ್ ರಿಂಕ್ನಲ್ಲಿ ವೃತ್ತಿಪರ ತರಬೇತಿಯನ್ನು ಪಡೆದರು ಮತ್ತು ಶಿಬಿರವು ಯಶಸ್ವಿಯಾಗಿ ಪೂರ್ಣಗೊಂಡಿತು. ಶಿಬಿರದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಇದೆ ತಿಂಗಳು 17 ಮತ್ತು 18ನೇ ತಾರಿಕಿನಂದು ನಡೆಯಲಿರುವ 8ನೇ ರಾಷ್ಟ್ರೀಯ ಬ್ಯಾಂಡಿ ಚಾಂಪಿಯನ್ಷಿಪ್ಗೆ ಕರ್ನಾಟಕ ಬ್ಯಾಂಡಿ ತಂಡವನ್ನು 12, 14, 17 ವರ್ಷದ ಒಳಗಿನ ಕಿರಿಯರ ತಂಡದಲ್ಲಿ ಭಾಗವಹಿಸಲಿದ್ದಾರೆ.
ಶಿಬಿರದ ಯಶಸ್ವಿ ಮುಕ್ತಾಯದ ನಂತರ, ಕರ್ನಾಟಕ ಬ್ಯಾಂಡಿ ಅಸೋಸಿಯೇಷನ್ನ ಕಾರ್ಯದರ್ಶಿ ಗುರುಮೂರ್ತಿ ಮತ್ತು ಆಂಧ್ರಪ್ರದೇಶ ಬ್ಯಾಂಡಿ ಅಸೋಸಿಯೇಷನ್ನ ಕಾರ್ಯದರ್ಶಿ ಲಕ್ಷ್ಮಿ, ಹಾಗೂ ಕರ್ನಾಟಕ ಬ್ಯಾಂಡಿ ತರಬೇತುದಾರ ಅನೂಪ್ ಡಿಸೋಜ ಅವರು ವಿದ್ಯಾರ್ಥಿಗಳಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರಗಳನ್ನು ವಿತರಿಸಿದರು.
12 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ
ಲಿಯೋನೆಲ್ ಲ್ಯೂಕ್ ಡಿಸೋಜಾ
ರಿತ್ವಿಕ್ ಬಗ್ಗನ್
ಆರ್ಯನ್ ಬಗ್ಗನ್
ಉಜ್ವಲ್ ಕುಮಾರ್ ಬಿ
ನಿಶಾನ್ ಸಿಟಿ
ಇವರುಗಳು ಭಾಗವಹಿಸಿದ್ದು
14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ
ಮಫಾಸ ಸೈನಬ್
ದನ್ವಿತ ಇಡಿ
ದಾನೀಯ ಕೆಆರ್
ಇವರುಗಳು ಭಾಗವಹಿಸಿದ್ದು
17 ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ
ಪ್ರೀತಂ ಜಿ ಹೆಚ್
ರಿತ್ವಿಕ್ ಸಾಯಿ ಬಿ ಎಲ್
ಆದಿಶೇಷ ಎಸ್
ಮುಗಿಲ್ ವರ್ಣನ್ ಕೆ ಎಮ್
ಲಿಬಾನ್ ಫಾತಿಹ್ ಎ ಎ
ತರುಣ್ ವಿ ಬಾಲಾಜಿ
ಇವರುಗಳು ಪಾಲ್ಗೊಂಡಿದ್ದರು
ಹಾಗೆಯೇ ಕರ್ನಾಟಕ ಬ್ಯಾಂಡಿ ತಂಡವು ವಿಜಯಶೀಲರಾಗಿ ಹೊರಹೊಮ್ಮಲಿ ಎಂದು ಕರ್ನಾಟಕ ಬ್ಯಾಂಡಿ ಅಸೋಸಿಯೇಷನ್ ಶುಭಾಶಯ ಕೋರಿದೆ.
Back to top button
error: Content is protected !!