ಕಾರ್ಯಕ್ರಮ

ವಾಹನ ಚಾಲಕರ ಸಂಘದ 56ನೇ ವಾರ್ಷಿಕೋತ್ಸವ, ಆಯುಧಪೂಜಾ ಸಮಾರಂಭ

ಸುಂಟಿಕೊಪ್ಪ,ಅ.22: ವಾಹನ ಚಾಲಕರ ಸಂಘದ ವಾಹನ ನಿಲ್ದಾಣಕ್ಕೆ ಮೇಲ್ಚಾವಣಿ ನಿರ್ಮಾಣ ಪ್ರಗತಿಯಲ್ಲಿದ್ದು ಕೆಲವು ತಾಂತ್ರಿಕ ಕಾರಣಗಳನ್ನು ಸರಿಪಡಿಸಿಕೊಂಡು ಶೀಘ್ರದಲ್ಲೇ ಲೋಕಾರ್ಪಣೆ ಮಾಡಿಲಾಗುವುದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್‌ಗೌಡ ಹೇಳಿದ್ದಾರೆ.
ವಾಹನಚಾಲಕರ ಸಂಘದ 56ನೇ ವಾರ್ಷಿಕೋತ್ಸವದ ಆಯುಧಪೂಜಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈಗಾಗಲೇ ಮೇಲ್ಚಾವಣಿ ಕಾಮಗಾರಿ ರೂ.40 ಲಕ್ಷ ವೆಚ್ಚದಲ್ಲಿ ಕಾಮಗಾರಿ ಆರಂಭಿಕ ಹಂತದಲ್ಲಿದ್ದು, ಹೆಚ್ಚು ಅನುದಾನ ಬೇಕಾಗುವ ನಿರೀಕ್ಷೆ ಇದೆ. ಈ ಅನುದಾನವನ್ನು ತಾವು ಭರಿಸಲಿದ್ದು, ಕಾಮಗಾರಿಯನ್ನು ಅದಷ್ಟು ಶೀಘ್ರವಾಗಿ ಮುಕ್ತಾಯಗೊಳಿಸಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು. ವಾಹನ ಚಾಲಕರ ಸಂಘಕ್ಕೆ ಅದ್ಭುತವಾದ ಇತಿಹಾಸವಿದ್ದು, ವಾಹನ ಚಾಲಕರು ಬದಲಾದ ಕಾಲಘಟ್ಟದಲ್ಲಿ ಚಾಲಕರು ಸುರಕ್ಷತೆಯಿಂದ ವಾಹನ ಚಲಿಸುವುದು ಜೋತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದ್ದು ಇದನ್ನು ಚಾಲಕರು ಮನಸ್ಸಿನಲ್ಲಿ ಇರಿಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಸುಂಟಿಕೊಪ್ಪದವರೆ ಆದ ಆದ್ಯಾತ್ಮಿಕ ಗುರು ರೋಶಿನಿ ರಾಮಪುರಂ ಅವರ ದಿ ಅಮರನಾಥಕೊಡ್ ಗ್ರಂಥವನ್ನು ಲೋಕಾರ್ಪಣೆಗೊಳಿಸಿದರು. ಬಹುಮುಖ ಪ್ರತಿಭೆಯ ರೋಶಿನಿ ರಾಮಪುರಂ ಅವರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು.
ಮುಖ್ಯ ಅತಿಥಿಗಳಲ್ಲಿ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ ಸುಂಟಿಕೊಪ್ಪ ವಾಹನ ಚಾಲಕರು ಮತ್ತು ಮಾಲೀಕರ ಸಂಘಕ್ಕೆ ಭವ್ಯವಾದ ಹಿರಿಮೆ ಇದೆ ಸುಂಟಿಕೊಪ್ಪದ ಅಭಿವೃದ್ಧಿ ಹಂತಗಳಲ್ಲಿ ಸಂಘದ ಕೊಡುಗೆ ಅಪಾರವಾಗಿದೆ. ಆನೇಕ ಬೇಡಿಕೆಗಳ ಈಡೇರಿಕೆಗೆ ಈ ವೇದಿಕೆಗೆ ಅವಕಾಶ ಕಲ್ಪಿಸಿದೆ. ಆಯುಧಾಪೂಜೆ ವಿಜಯದಶಮಿಯ ಸಂದೇಶವಾದ ದುಷ್ಟಶಿಕ್ಷಣ ಶಿಷ್ಟರಕ್ಷಣಾ ಸಂದೇಶವು ಸಮಾಜಕ್ಕೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾಡಳಿತದ ಕಾನೂನು ಸಲಹೆಗಾರರಾದ ಎ.ಲೋಕೇಶ್‌ಕುಮಾರ್ ಮಾತನಾಡಿ ಸುಂಟಿಕೊಪ್ಪ ವಾಹನ ಚಾಲಕರ ವೇದಿಕೆಯು ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು ಮಕ್ಕಳ ಪ್ರತಿಭೆಯು ಈ ವೇದಿಕೆಯ ಮೂಲ;ಕ ಅನಾವರಣಗೊಂಡು ದೇಶ ವಿದೇಶಗಳಲ್ಲಿ ಖ್ಯಾತಿ ಪಡೆಯುವಂತಾಗಲಿ ಎಂದು ಹಾರೈಸಿದರು.
ಸಮಾರಂಭವನ್ನು ಉದ್ದೇಶಿಸಿ ಜಿ.ಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ,ಮಾಜಿ ಸದಸ್ಯರುಗಳಾದ ಪಿ.ಎಂ.ಲತೀಫ್, ಬಿ.ಬಿ.ಭಾರತೀಶ್, ಗ್ರಾ.ಪಂ.ಮಾಜಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ,ವಿ.ಜಿ.ಲೋಕೇಶ್, ಎಡಿಕೇರಿ ಪ್ರಸನ್ನ, ರೋಶಿನಿ ರಾಪುರಂ, ಪ್ರಸಾದ್‌ಕುಟ್ಟಪ್ಪ, ಪಿ.ಎಲ್ ಹರ್ಷದ್, ಎ.ಎಂ.ಹಕೀA, ರಫೀಕ್‌ಖಾನ್, ಸೇರಿದಂತೆ ಅತಿಥಿಗಳು ಆಯುಧಾಪೂಜೆ ಮತ್ತು ವಿಜಯದಶಮಿಯ ಕುರಿತು ಮಾತನಾಡಿ ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪ್ರಸಾದ್‌ಕುಟ್ಟಪ್ಪ ಮಾತನಾಡಿ ರೋಶನಿ ರಾಮಪುರಂ ಅವರು ತಮ್ಮ ತಂದೆಯ ಸ್ಮರಣಾರ್ಥ ಮೃತದೇಹಗಳನ್ನು ಸರಂಕ್ಷಿಸಿ ಇಡುವ ಶೀತಲೀಕರಣ ಪೆಟ್ಟಿಯನ್ನು ವಾಹನ ಚಾಲಕರ ಸಂಘಕ್ಕೆ ಕೊಡುಗೆಯಾಗಿ ನೀಡಲಿದ್ದಾರೆ ಮತ್ತು ಬಸ್ ನಿಲ್ಧಾಣದಲ್ಲಿ ಶುದ್ಧ ನೀರಿನ ಘಟಕವನ್ನು ಪ್ರಾ.ಕೃ.ಪ.ಸ.ಸಂ.ನಿ.ಅಧ್ಯಕ್ಷ ಜೆರ್ಮಿಡಿಸೋಜ ಅವರು ನಿರ್ಮಿಸಿಕೊಡುವುದಾಗಿ ಘೋಷಣೆ ಮಾಡಿದರು.
ಸಮಾರಂಭದ ವೇದಿಕೆಯಲ್ಲಿ ಉದ್ಯಮಿ ವಿಲಿಯಂ, ಆಶಾ ಟೋಮಿ, ಪ್ರಾ.ಕೃ.ಪ.ಸ.ಸಂ.ನಿ.ಅಧ್ಯಕ್ಷ ಜೆರ್ಮಿಡಿಸೋಜ, ದಾನಿಗಳು ಜಯಣ್ಣ, ವಾಹನ ಚಾಲಕರ ಸಂಘದ ಅಧ್ಯಕ್ಷಕೆ.ವಿ,ಟ್ಟಣ್ಣ ರೈ, ಆಟೋಚಾಲಕರ ಸಂಘದ ಅಧ್ಯಕ್ಷ ಎ.ಎಂ.ಶರೀಫ್ ಮತ್ತಿತರರು ಇದ್ದರು.
ಕಾರ್ಯಕ್ರಮದ ಮೊದಲಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಕೆದಕಲ್ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸಂಜುಪೊನ್ನಪ್ಪ, ಪ್ರಾ.ಕೃ.ಪ.ಸ.ಸಂ.ನಿ. ಉಪಾಧ್ಯಕ್ಷ ಪಟ್ಟೆಮನೆ ಉದಯಕುಮಾರ್ ನೇರವೇರಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಡಾ.ಮಂತರ್‌ಗೌಡ ಅವರನ್ನು ವಾಹನ ಚಾಲಕರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಶಾಲುಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.
ಮೊದಲಿಗೆ ವಾಹನ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಮುನಿರ್ ಕಂಬಿಬಾಣೆ ಸ್ವಾಗತಿಸಿ, ಸೌಭಾಗ್ಯ ನಿರೂಪಿಸಿ, ಎಂ.ಎಸ್.ಸುನಿಲ್ ವಂದಿಸಿದರು.
ಸಾವಿರಾರು ಸಂಖ್ಯೆಯಲ್ಲಿ ನೇರೆದಿದ್ದ ಸಾರ್ವಜನಿಕರಿಗೆ ನೃತ್ಯ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮವು ಮನಸೋರೆಗೊಳಿಸಿತ್ತು. ಅದೇ ರೀತಿಯಲ್ಲಿ ವಾಹನಗಳ ಅಲಂಕಾರ, ಮಕ್ಕಳ ಮಂಟಪಗಳು, ಕಛೇರಿ ಹಾಗೂ ಸಂಘ ಸಂಸ್ಥೆ,ಅAಗಡಿ ಮುಂಗಟು, ವರ್ಕ್ಶಾಫ್ ಸೇರಿದಂತೆ ವಿವಿಧ ಅಲಂಕಾರ ಸ್ಪರ್ಧೆಗಳಿಗೆ ವಿದ್ಯುತ್ ವಿದ್ಯುತ್ ದೀಪಾಗಳಿಂದ ಅಲಂಕರಿಸಲಾಗಿದ್ದು ಜನಮನ ಸೂರೆಗೊಂಡಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!