ಸಭೆ

ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ

ಕುಶಾಲನಗರ, ಆ 27 : ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಮಟ್ಟದ ಅನುಷ್ಠಾನ ಸಮಿತಿಯ ಪ್ರಗತಿ ಪರಿಸೀಲನಾ ಗುರುವಾರ ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ನಡೆಯಿತು.

ತಾಲ್ಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆ ನಡೆದ ಸಭೆಯಲ್ಲಿ ಮೊದಲಿಗೆ ಅನುಪಾಲನ ವರದಿ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. ಇಲಾಖಾವಾರು ಅಧಿಕಾರಿಗಳು ಇಲಾಖೆಯಲ್ಲಿ ಕೈಗೊಂಡ ಪ್ರಗತಿ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಬಸವನಹಳ್ಳಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಕರ್ತವ್ಯ ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ದೂರಿನ ಏನು ಕ್ರಮ ಕೈಗೊಂಡಿದ್ದಿರಿ ಎಂದು ಅಧ್ಯಕ್ಷರು ಸಿಡಿಪಿಓ ಶ್ರೀದೇವಿ ಅವರನ್ನು ಪ್ರಶ್ನಿಸಿದರು. ಶ್ರೀದೇವಿ ಮಾತನಾಡಿ, ಈ ವಿಷಯ ಕುರಿತು
ಉಪ ನಿರ್ದೇಶಕರ ಗಮನಕ್ಕೆ ತಂದ ಬಳಿಕ ಅವರು ಕೂಡ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರ್ಯಕರ್ತೆಯನ್ನು ಬೇರೆ ಕೇಂದ್ರಕ್ಕೆ ವರ್ಗಾವಣೆ ಮಾಡುವಂತೆ ಸೂಚನೆ ನೀಡಿದ್ದಾರೆ. ಮುಂದಿನ ಒಂದು ವಾರದೊಳಗೆ ಕೇಂದ್ರದ ದಾಖಲಾತಿ,ಆಹಾರಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಜೇನುಕಲ್ಲು ಬೆಟ್ಟದ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಗೆ ತಿಳುವರಿಕೆ ನೋಟಿಸ್ ನೀಡಿದ ಮೇರೆಗೆ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದು,ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು. ಪ್ರತಿ ಅಂಗನವಾಡಿ ಕೇಂದ್ರಗಳಲ್ಲೂ ಬಾಲವಿಕಾಸ ಸಮಿತಿ ರಚಿಸಿ ಉತ್ತಮ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂದು ಶಶಿಧರ್ ಸೂಚನೆ ನೀಡಿದರು.
ಗೃಹಲಕ್ಷ್ಮಿ ಯೋಜನೆ ಮಾಹಿತಿ ನೀಡಿದ ಶ್ರೀದೇವಿ ಅಂಗನವಾಡಿ ಕಾರ್ಯಕರ್ತರು ಮನೆ ಮನೆ ಭೇಟಿ ಮಾಡಿ ಸಮೀಕ್ಷೆ ನಡೆಸುತ್ತಿದ್ದಾರೆ. ಈಗಾಗಲೇ ಮರಣ ಹೊಂದಿದ ಫಲಾನುಭವಿಗಳ ಖಾತೆಗೆ ಹಣ ಹಾಕದಂತೆ ಬ್ಯಾಂಕ್ ಗಳಿಗೆ
ತಿಳುವಳಿಕೆ ಪತ್ರ ನೀಡುವಂತೆ ಡಿಡಿ ಅವರಿಗೆ ಮನವಿ‌ ಮಾಡಿದ್ದೇವೆ ಎಂದರು.
ಜೂನ್ ನಿಂದ ಜುಲೈ ಅವರೆ ಗೃಹ ಲಕ್ಷ್ಮಿ ಹಣ ಜಮೆಯಾಗಿದೆ.ಉಳಿದ ಫಲಾನುಭವಿಗಳಿಗೂ
ಹಂತ ಹಂತ ಆಗುತ್ತಿದೆ.ಆಗಸ್ಟ್ ಆಗಬೇಕು.ಇದುವರೆಗೆ ರೂ.
4.5 ಕೋಟಿ ಹಣ ಜಮೆಯಾಗಿದೆ.ಇದರಲ್ಲಿ 122 ನಿಧನರಾದ್ದು,
44 ಐಟಿ ಪೆಂಡಿಂಗ್ ಇರುವವರನ್ನು ಕೈಬಿಡಲಾಗಿದೆ ಎಂದು ಮಾಹಿತಿ ನೀಡಿದರು.
ಶಕ್ತಿ ಯೋಜನೆ ಬಗ್ಗೆ ಮಾಹಿತಿ ಇಲ್ಲದೆ ಸಭೆಗೆ ಆಗಮಿಸಿದ ಸಂಚಾರಿ ನಿಯಂತ್ರಣಾಧಿಕಾರಿ ಮಲ್ಲೇಶ್ ಹಾಗೂ ಸಭೆಗೆ ಹಾಜರಾಗದ ಡಿಪೋ ಮೇನೇಜರ್ ಅವನ್ನು ತರಾಟೆಗೆ ತೆಗೆದುಕೊಂಡರು. ಮಾಹಿತಿ ಇಲ್ಲದೆ ಸಭೆಗೆ ಏನೆ ಬಂದಿರಿ ಎಂದು ಪ್ರಶ್ನಿಸಿದರು. ಮೇಲಾಧಿಕಾರಿಗಳು ಸೂಚನೆಗೆ ಮೇರೆಗೆ ಸಭೆಗೆ ಬಂದ್ದೇನೆ ಎಂದು ಹೇಳಿದ‌ ಮಲ್ಲೇಶ್, ಬಸವನಹಳ್ಳಿ ಬಸ್ ಡಿಪೋದಲ್ಲಿ ಪೆಟ್ರೋಲ್ ಬಂಕ್ ರೆಡಿಯಾಗಿದೆ.ಎಲೆಕ್ಟ್ರಿಕ್ ಕೆಲದ ಪರಿಶೀಲನೆ ಬಾಕಿ ಇದೆ.ಸರ್ವೀಸ್ ಟೆಷನ್ ಕೂಡ ರೆಡಿಯಾಗಿದೆ.ಮಡಿಕೇರಿ ಬಂದ ಹೊಸ ಎರಡು ಬಸ್‌ಗಳು
ಬೆಂಗಳೂರು – ಮೈಸೂರು ಹಾಗೂ ಮೈಸೂರು – ಮಂಗಳೂರು.ಸಂಚರಿಸುತ್ತಿವೆ ಎಂದರು.ತಾಲ್ಲೂಕಿನಲ್ಲಿ 1116 ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸಲಾಗಿದೆ ಎಂದು ತಿಳಿಸಿದರು.
ಗೃಹ ಜ್ಯೋತಿ ಯೋಜನೆ ಮಾಹಿತಿ ನೀಡಿದ ಚೆಸ್ಕಂ ಅಧಿಕಾರಿಗಳು ಒಟ್ಟು 36133 ಮನೆಗಳ ಪೈಕಿ 26045 ನೊಂದಾಯಿಸಲಾಗಿದೆ.ಬಾಕಿ 10088 ಬಾಕಿ ಇದೆ.ನಗರ ಪ್ರದೇಶದಲ್ಲಿ ಶೇ.70 ಗುರಿ‌ಸಾಧಿಸಲಾಗಿದೆ.ಗ್ರಾಮೀಣ ಭಾಗದಲ್ಲಿ ಸ್ವಲ್ಪ ವಿಳಂಬವಾಗಿದೆ ಎಂದರು. ತಾಲ್ಲೂಕು ವ್ಯಾಪ್ತಿಯಲ್ಲಿ ಅಪಾಯಕಾರಿ 84 ಕಬ್ಬಿಣದ ವಿದ್ಯುತ್ ಕಂಬಗಳಿದ್ದು, ಅನುದಾ‌ನ ಬಂದ‌ ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಸಮಿತಿ ಸದಸ್ಯ ಕೃಷ್ಣೇಗೌಡ ಮಾತನಾಡಿ, ತೊರೆನೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಡಾಂಚಿನ ಪ್ರದೇಶ ಅಳುವಾರದಲ್ಲಿರುವ ಕಬ್ಬಿಣದ ಕಂಬಗಳನ್ನು ಬದಲಿಸುವಂತೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಚೆಸ್ಕಂ ಇಲಾಖೆಗೆ ರೂ.
40 ಕೋಟಿ ಅನುದಾನ ಬಂದರೂ ಕುಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕೈಗೊಂಡಿಲ್ಲ ಎಂದು ಹೇಳಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಮುಂದಿನ ಬಜೆಟ್ ನಲ್ಲಿ ಎಲ್ಲಾ ಕಬ್ಬಿಣದ ಕಂಬಗಳನ್ನು ಬದಲಾವಣೆ ಮಾಡುವುದಾಗಿ ಹೇಳಿದರು.
ಪಡಿತರ ಆಹಾರ ವಿತರಣೆ ಕುರಿತು ತಾಲ್ಲೂಕು ಆಹಾರ ನಿರೀಕ್ಷಕಿ ಸ್ವಾತಿ ಮಾತನಾಡಿ,ನ್ಯಾಯಬೆಲೆ ಅಂಗಡಿಗಳಲ್ಲಿ ಜಾತಿ ಪಟ್ಟಿ, ಇ ಕೆವೈಸಿ ಮಾಡಿಸಲು ಸೂಚನೆ ನೀಡಲಾಗಿದೆ.ಆದರೆ ನೆಟ್ವರ್ಕ್ ಸಮಸ್ಯೆ ಯಿಂದ ಸಾಧ್ಯವಾಗಿಲ್ಲ ಎಂದರು.2013 ನೇ ಇಸವಿಯಿಂದ ಇಲ್ಲಿಯ ವರೆಗೆ 8679 ಎಪಿಎಲ್ ಕಾರ್ಡುಗಳು
ರದ್ದಾಗಿವೆ. ಪ್ರತಿ ವರ್ಷ ಇ ಕೆವೈಸಿ ಕಡ್ಡಾಯವಾಗಿ ಮಾಡಸಬೇಕು ಎಂದರು.
ಯುವ ನಿಧಿಗೆ ನೊಂದಾಯಿಸುವವರ ಸಂಖ್ಯೆ ಕ್ಷೀಣಿಸಿದೆ.ರಾಜ್ಯದಲ್ಲಿ ಕೊಡಗು ಕೊನೆ ಸ್ಥಾನದಲ್ಲಿದೆ ಅಧಿಕಾರಿಗಳು ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಧಿಕಾರಿ ಮಂಜುನಾಥ್ ಮಾತನಾಡಿ,ಎಲ್ಲಾ ಪದವಿ ಹಾಗೂ ಡಿಪ್ಲೊಮಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ನೀಡುತ್ತಿದ್ದೇವೆ ಎಂದರು. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ತಾಲ್ಲೂಕು ಗ್ಯಾರಂಟಿ ಸಮಿತಿ ವತಿಯಿಂದ ಅಳುವಾರ ವಿವಿಯಲ್ಲಿ ನಡೆಸಿದ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ ಯಶಸ್ವಿಯಾಗಿದೆ‌‌.ಇಂತಹ ಕಾರ್ಯಾಗಾರಗಳು ಹೆಚ್ಚು ಹೆಚ್ಚು ನಡೆಸಬೇಕು ಎಂದು ಶಶಿಧರ್ ಹೇಳಿದರು.
ಗ್ರಾಮ ಒನ್ ಕೇಂದ್ರಗಳಿಗೆ ಸೂಚನೆ : ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ
ಗ್ರಾಮ‌ಒನ್ ಸೇವಾ ಕೇಂದ್ರಗಳು ಸರ್ಕಾರದ ನಿಗದಿ ದರಕ್ಕಿಂತ ಅಧಿಕ ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ.ಸೇವಾ ಕೇಂದ್ರದ ಬದಲಿಗೆ ಸೂಲಿಗೆ ಕೇಂದ್ರವಾಗುತ್ತಿವೆ ಎಂಬ ಆರೋಪ ಬರುತ್ತಿದೆ.ಇದಕ್ಕೆ ಅವಕಾಶ ನೀಡಬೇಡಿ. ಅರ್ಜಿದಾರರೊಂದಿಗೆ ಸೌಜನ್ಯ ವಾಗಿ ವರ್ತಿಸ ಬೇಕು.ದರ ಪಟ್ಟಿ ಹಾಕಬೇಕು. ಸಮಿತಿ ರಚನೆ ಮಾಡಿ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅರ್ಜಿ ತಿರಸ್ಕರ ಆರೋಪ : ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಪಡೆಯಲು ಗ್ರಾಮ ಒನ್ ನಿಂದ ಅರ್ಜಿ ಹಾಕಿದರೆ.ಎಲ್ಲಾ ದಾಖಲೆಗಳು ಸರಿ ಇದ್ದರು ತಹಶೀಲ್ದಾರ್ ಕಚೇರಿ ಸಿಬ್ಬಂದಿ ಪುಷ್ಪಾ ಅನವಶ್ಯಕವಾಗಿ ಅರ್ಜಿ ತಿರಸ್ಕರ ಮಾಡುತ್ತಾರೆ ಎಂದು ದೂರಿದರು.ಗ್ರಾಮ ಒನ್ ಅರ್ಜಿ ಹಾಕಬೇಡಿ.ನೆಮ್ಮದಿ ಕೇಂದ್ರದಿಂದಲೇ ಅರ್ಜಿ ಹಾಕುವಂತೆ ಒತ್ತಡ ಹಾಕುತ್ತಾರೆ ಎಂದು ದೂರಿದರು.ಈ ಬಗ್ಗೆ ತಹಶೀಲ್ದಾರ್ ಅವರ ಮೂಲಕ ಸಿಬ್ಬಂದಿ ಪುಷ್ಪಾಗೆ ಎಚ್ಚರಿಕೆಯ ನೋಟಿಸ್ ನೀಡುವಂತೆ ಶಶಿಧರ್ ಸೂಚನೆ ನೀಡಿದರು.
ಈ ಸಂದರ್ಭ ಸಮಿತಿ ಜಿಲ್ಲಾ ಉಪಾಧ್ಯಕ್ಷ ಶಶಿಭೀಮಯ್ಯ, ಸದಸ್ಯರಾದ ಕೂಡಿಗೆಅಣ್ಣಯ್ಯ, ತಾಲ್ಲೂಕು ಸಮಿತಿ ಸದಸ್ಯರಾದ ಬಿ.ಸಿ.ಮಲ್ಲಿಕಾರ್ಜುನ,ಕೆ.ಇ.ಅಬ್ದುಲ್ ರಜಾಕ್,ಜೆ.ಫಿಲೋಮಿನಾ,ಸುಹಾದ ಆಶ್ರಪ್,ಎಸ್.ಎಸ್.ವಿವೇಕಾನಂದ,ಎಸ್.ಎ.ಶ್ರೀನಿವಾಸ,ಎನ್.ಶ್ರೀನಿವಾಸ್ ಕುಮಾರ್, ಯು.ಎಂ.ಕಿಶೋರ್, ಹೆಚ್.ಯು.ರಫೀಕ್ ಖಾನ್,ಎಂ.ಎ.ಆದಂ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!