ಕುಶಾಲನಗರ, ಆ 23: ಅರ್ಯವೈಶ್ಯ ಮಹಾಸಭಾ ವತಿಯಿಂದ ಡಿಸೆಂಬರ್ 25 26 27ರಂದು ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯಲಿರುವ ಗ್ಲೋಬಲ್ ಆಕ್ಸಿಲೇಟರ್ ವಿಷನ್ ಸಮಿಟ್ ಪ್ರಚಾರಕ್ಕಾಗಿ ಕಾಲ್ನಡಿಗೆ ಜಾಥವನ್ನು ಕುಶಾಲನಗರದ ಮಾರಿಯಮ್ಮ ದೇವಸ್ಥಾನದಿಂದ ರಥ ಬೀದಿಯ ಮುಖಾಂತರ ಆಂಜನೇಯ ದೇವಸ್ಥಾನದವರೆಗೂ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಬಿ ಆರ್ ನಾಗೇಂದ್ರ ಪ್ರಸಾದ್ ರವರು ವಹಿಸಿದ್ದರು. ಕಾರ್ಯಕ್ರಮವನ್ನು ಕುಶಾಲನಗರ ಡೆಪ್ಯೂಟಿ ಸೂಪರ್ಡೆಂಟ್ ಆಫ್ ಪೊಲೀಸ್ (DySP) ಪಿ ಚಂದ್ರಶೇಖರ್ ರವರು ಉದ್ಘಾಟಿಸಿ ಈ ಕಾರ್ಯಕ್ರಮ ಯಶಸ್ವಿಯಾಗಲೆಂದು ಹಾರೈಸಿದರು.
ಆರ್ಯವೈಶ್ಯ ಮಂಡಳಿ ಅಧ್ಯಕ್ಷರು ಹಾಗೂ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ನಿರ್ದೇಶಕರಾದಂತಹ ಬಿ ಆರ್ ನಾಗೇಂದ್ರ ಪ್ರಸಾದ್ ರವರು ಮಾತನಾಡುತ್ತಾ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಸದೃಢ ಯುವ ಭಾರತದ ನಿರ್ಮಾಣಕ್ಕಾಗಿ ಪಣತೊಟ್ಟಿದೆ ಇದರ ಅಂಗವಾಗಿ ಮುಂಬರುವ ವರ್ಷಗಳಲ್ಲಿ 5000 ಸ್ಟಾಟ್ ಅಪ್ ಕಂಪನಿಗಳನ್ನು ಪ್ರಾರಂಭಿಸಲು 5 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಕಲ್ಪಿಸುವಂತಹ ವೇದಿಕೆಯನ್ನು ಗ್ಲೋಬಲ್ ಆಕ್ಸಿಲೇಟರ್ ವಿಷನ್ ಸಮಿಟ್ ಎಂಬ ಶೀರ್ಷಿಕೆಯಲ್ಲಿ ಒಂದೇ ವೇದಿಕೆಯಲ್ಲಿ ಮಾಹಿತಿ, ತರಬೇತಿ, ಸಹಕಾರ ನೀಡುವ ಅವಕಾಶವನ್ನು ಕಲ್ಪಿಸುತ್ತಿದೆ ಎಂದರು. ಈ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲಾ ಬಾಂಧವರಗಳು ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಬೇಕಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿ ಎಲ್ ಸತ್ಯನಾರಾಯಣ, ಕೊಡಗು ಜಿಲ್ಲಾಧ್ಯಕ್ಷರು ಕರ್ನಾಟಕ ಆರ್ಯವೈಶ್ಯ ಮಹಾಸಭಾ, ಬೆಂಗಳೂರು. ಮಡಿಕೇರಿಯ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷರಾದ ವಿ ಎಸ್ ಚಂದ್ರಶೇಖರ್, ಕಾರ್ಯದರ್ಶಿಗಳಾದ ಪ್ರವೀಣ್ ಕೆ, ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಬಿ ಅಮೃತ್ ರಾಜ್, ಆರ್ಯವೈಶ್ಯ ಮಹಿಳಾ ಮಂಡಳಿಯ ಅಧ್ಯಕ್ಷರಾದ ವಾಣಿ ಮಹೇಶ್, ವಾಸವಿ ಯುವಜನ ಸಂಘದ ಅಧ್ಯಕ್ಷರಾದ ವಿ ಜೆ ಬಾಲಾಜಿ, ವಾಸವಿ ಯುವತಿಯರ ಸಂಘದ ಅಧ್ಯಕ್ಷರಾದ ಅನುಷಾ ಅರ್ಜುನ್, ವಾಸವಿ ದೀಕ್ಷಾ ಸಮಿತಿಯ ಅಧ್ಯಕ್ಷ ಕೆ ಜೆ ಚಿನ್ನಸ್ವಾಮಿ, ವಾಸವಿ ಕ್ಲಬ್ ನ ಅಧ್ಯಕ್ಷರಾದ ವಿ ಆರ್ ಮಂಜುನಾಥ್, ಆರ್ಯವೈಶ್ಯ ಮಂಡಳಿಯ ಪದಾಧಿಕಾರಿಗಳಾದ, ಪ್ರಶಾಂತ್ ಪಿ ಎಸ್, ಬಿ ಎಲ್ ಅಶೋಕ್, ಕೆಜೆ ಸತೀಶ್, ಬಿಪಿ ಕೃಷ್ಣಮೂರ್ತಿ, ವೈಶಾಖ್ ಮತ್ತು ಎಲ್ಲಾ ಅಂಗ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಕುಶಾಲನಗರದ ಪ್ರಮುಖ ಬೀದಿಯಲ್ಲಿ ಘೋಷವಾಕ್ಯಗಳೊಂದಿಗೆ ಮೆರವಣಿಗೆ ನಡೆಯಿತು.
Back to top button
error: Content is protected !!