ಕುಶಾಲನಗರ, ಆ 14: ಕುಶಾಲನಗರದ ಮಹಾತ್ಮಾ ಗಾಂಧಿ ಪದವಿ ಕಾಲೇಜಿನಲ್ಲಿ ಫ್ರೆಶರ್ಸ್ ಡೇ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ
ಮೈಸೂರಿನ ಪ್ರೇರಣಾ ಫೌಂಡೇಶನ್ ಕಾರ್ಯದರ್ಶಿ
ನಿರಂಜನ್ ರಾಜೇ ಅರಸ್
ಕಾರ್ಯಕ್ರಮ ಉದ್ಘಾಟಿಸಿದರು. ನೂತನ ವಿದ್ಯಾರ್ಥಿ ಸಮಿತಿ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ
ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಶಿಕ್ಷಣ ಎಂಬುದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಒಂದು ಪೂರಕ ಸಾಧನವಾಗಿದೆ. ವಿದ್ಯಾರ್ಥಿಗಳಲ್ಲಿ ಉತ್ತಮ
ಚಾರಿತ್ರ್ಯ ನಿರ್ಮಾಣ, ಆಂತರಿಕ ಬೆಳವಣಿಗೆ, ಸ್ವಾವಂಬಿಗಳನ್ನು ಸೃಷ್ಠಿಸುವ ಉಪಕರಣವಾಗಿದೆ ಎಂದು ವಿವರಿಸಿದರು.
ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಬೇಕಿದೆ. ಭವಿಷ್ಯದ ಜೀವನದ
ಕನಸುಗಳನ್ನು ಕಾಣುವುದರೊಂದಿಗೆ ಅದನ್ನು ಸಾಕಾರಗೊಳಿಸಲು ಶ್ರಮವಹಿಸುವಂತೆ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪದವಿ ಕಾಲೇಜು ಪ್ರಾಂಶುಪಾಲೆ ಲಿಖಿತಾ ಟಿ.ಎ.ಅವರು ನೂತನ ವಿದ್ಯಾರ್ಥಿ ಸಮಿತಿ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಈ ಸಂದರ್ಭ
ಕಛೇರಿ ಅಧೀಕ್ಷಕ ಮಹೇಶ್ ಅಮೀನ್, ವಿದ್ಯಾಸಂಸ್ಥೆ ಖಜಾಂಚಿ ನಂಜಪ್ಪ,
ಉಪನ್ಯಾಸಕ ವಿಕ್ರಂ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಇದ್ದರು.