ಕೂಡಿಗೆ, ಆ. 12: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಸ್. ಆರ್. ಪುರುಷೋತ್ತಮ ರವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನೆರವೇರಿತು.
ಅಧ್ಯಕ್ಷ ಎಸ್. ಆರ್. ಪುರುಷೋತ್ತಮ ಮಾತಾನಾಡುತ್ತಾ ಸಂಘವು ಈ ಸಾಲಿನಲ್ಲಿ 3. ಲಕ್ಷ 45. ಸಾವಿರದಷ್ಟು ಲಾಭಾಂಶವನ್ನು ಗಳಿಸಿದೆ. ಸಂಘದ ಅಭಿವೃದ್ಧಿ, ಮತ್ತು ಲಾಭಾಂಶ ಗಳಿಸಲು ಸಂಘದ ಸದಸ್ಯರುಗಳು ಮುಖ್ಯ ಕಾರಣರಾಗಿರುತ್ತಾರೆ. ಸಂಘದ ಅಭಿವೃದ್ಧಿ ಪೂರಕವಾದ ಯೋಜನೆಗಳನ್ನು ಹಮ್ಮಿಕೊಂಡು ಹಾಲು ಉತ್ಪಾದಕರ ಸಂಘದ ಸದಸ್ಯಗಳಿಗೆ ಒಕ್ಕೂಟದ ವತಿಯಿಂದ ನೀಡಲಾಗುವ ಗುಣಮಟ್ಟದ ಪಶುಅಹಾರ ಮತ್ತು ಹಸುಗಳಿಗೆ ನೀಡುವ ಚಿಕಿತ್ಸೆಯ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ಸಂಘದ ಸದಸ್ಯರು ಸಂಘಕ್ಕೆ ಸಂಬಂಧಿಸಿದಂತೆ ಅನೇಕ ಚರ್ಚೆಗಳನ್ನು ನಡೆಸಿದರು.
ಸಭೆಯಲ್ಲಿ ಹಾಲು ಒಕ್ಕೂಟದ ವಿಸ್ತರಣಾ ಅಧಿಕಾರಿ ವೀಣಾ, ಉಪಾಧ್ಯಕ್ಷ ಪುಟ್ಟೇಗೌಡ, ನಿರ್ದೇಶಕರುಗಳಾದ ರುದ್ರಪ್ಪ, ಶಿವನಾಂದ ರೈ, ರಮೇಶ್, ಸುರೇಶ್ ಕುಮಾರ್ ,ಗಿರೀಶ್,ಬಿಂದಮ್ಮ ಗೌರಮ್ಮ, ಪದ್ಮ,ಸಲೀನಾ, ರಂಜಿತ್, ಮಂಜುನಾಥ, ಕಾರ್ಯದರ್ಶಿ ರಾಮೇಗೌಡ, ಪರಿವೀಕ್ಷಕ ಸುನೀಲ್ ಕುಮಾರ್, ಸೇರಿದಂತೆ ನೂರಾರು ಸಂಘದ ಸದಸ್ಯರು ಹಾಜರಿದ್ದರು.
Back to top button
error: Content is protected !!