ಸಭೆ

ಕುಶಾಲನಗರ ತಾಲ್ಲೂಕು ನೃತ್ಯ ಸಂಯೋಜಕರ ಸಂಘ ಉದ್ಘಾಟನಾ ಸಮಾರಂಭದ ಪೂರ್ವಬಾವಿ ಸಭೆ

ಕುಶಾಲನಗರ, ಆ 10: ಕುಶಾಲನಗರ ತಾಲ್ಲೂಕು ನೃತ್ಯ ಸಂಯೋಜಕರ ಸಂಘದ ದ್ವಿತೀಯ ಸಭೆಯು ಕುಶಾಲನಗರದ ಟೈಮ್ ಬ್ರೇಕರ್ಸ್ ಡ್ಯಾನ್ಸ್ ಸ್ಟುಡಿಯೋ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ತಾಲ್ಲೂಕು ನೃತ್ಯ ಸಂಯೋಜಕರ ಸಂಘದ ಉದ್ಘಾಟನೆ ಕಾರ್ಯಕ್ರಮ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭ ಕುಶಾಲನಗರ ತಾಲ್ಲೂಕು ಭಾಗದ ಒಟ್ಟು 18 ನೃತ್ಯ ಶಾಲೆಯ ಸಂಯೋಜಕರುಗಳು ಸಭೆಯಲ್ಲಿ ಹಾಜರಿದ್ದರು. ಈ ಸಂದರ್ಭ ತಾಲ್ಲೂಕು ನೃತ್ಯ ಸಂಯೋಜಕರ ಸಂಘದ ಅಧ್ಯಕ್ಷರಾದ ಟೈಮ್ ಬ್ರೇಕರ್ಸ್ ಡ್ಯಾನ್ಸ್ ಸ್ಟುಡಿಯೋ ನೃತ್ಯ ಸಂಯೋಜಕರಾದ ಪ್ರದೀಪ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ತಾಲ್ಲೂಕು ಮಟ್ಟದ ನೃತ್ಯ ಸಂಯೋಜಕರ ಸಂಘ ರಚನೆಯಾಗುತ್ತಿದ್ದು ನಮಗೆ ಹೆಮ್ಮೆಯ ಮತ್ತು ಸಂತೋಷದ ವಿಚಾರವಾಗಿದೆ, ಸಂಘದಲ್ಲಿ ಕುಶಾಲನಗರ ತಾಲ್ಲೂಕು ಒಳಗೊಂಡ ಎಲ್ಲಾ ನೃತ್ಯ ಶಾಲೆಗಳ ನೃತ್ಯ ಸಂಯೋಜಕರು ಸದಸ್ಯತ್ವ ಪಡೆದುಕೊಳ್ಳುವ ಬಗ್ಗೆ ಹಾಗೂ ನೃತ್ಯ ಶಾಲೆಗಳ ಸಮಾಜಿಕ ಬೆಳವಣಿಗೆ ಬಗ್ಗೆ, ನೃತ್ಯ ಶಾಲಾ ವಿದ್ಯಾರ್ಥಿಗಳ ಕಾಳಜಿ ವಹಿಸುವಿಕೆ ಮತ್ತು ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳ ಬಗ್ಗೆ ಮತ್ತು ನಮ್ಮ ಸಂಘದ ವತಿಯಿಂದ ನೃತ್ಯ ಕಲಾ ಸಂಸ್ಕೃತಿ ಉಳಿಸುವ ಹೆಚ್ಚಿನ ಕಾರ್ಯಕ್ರಮಗಳು ಹಾಗೂ 2026-27 ನೇ ವರ್ಷದಲ್ಲಿ ಆಯೋಜಿಸ ಬೇಕಾದ ಕಾರ್ಯಕ್ರಮಗಳ ಪಟ್ಟಿ ಬಗ್ಗೆ ಮಾತನಾಡಿ ಎಲ್ಲಾ ಸದಸ್ಯರಲ್ಲಿ ಮಾಹಿತಿ ನೀಡಿದರು. ಸಭೆಯಲ್ಲಿ ತಾಲ್ಲೂಕು ಸಂಘದ ಕಾರ್ಯದರ್ಶಿಯಾದ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ನೃತ್ಯ ಸಂಯೋಜಕರಾದ ಅಕ್ತರ್ ಮಾತನಾಡಿ, ಕುಶಾಲನಗರ ತಾಲ್ಲೂಕು ಭಾಗದಲ್ಲಿ ನೃತ್ಯ ಕಲಾವಿದರಿಗೆ ಹೆಚ್ಚಿನ ವೇದಿಕೆ ದೊರಕಬೇಕು, ನೃತ್ಯ ಶಾಲೆಗಳನ್ನು ಹೆಚ್ಚು ವರ್ಷಗಳಿಂದ ನೃತ್ಯ ಸಂಸ್ಕೃತಿಯನ್ನು ಉಳಿಸುತ್ತಾ ಬಂದಿರುವ ಎಲ್ಲಾ ನೃತ್ಯ ಶಾಲೆಗಳಿಗೆ ಸರ್ಕಾರದಿಂದ ಹೆಚ್ಚು ಪ್ರೋತ್ಸಾಹದ ಅಗತ್ಯವಿದೆ. ತಾಲ್ಲೂಕು ಭಾಗದಲ್ಲಿ ಅಯೋಜಿಸಲಾಗುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಮ್ಮ ತಾಲ್ಲೂಕು ಸಂಘದ ಎಲ್ಲಾ ಸದಸ್ಯರಿಗೆ ಪ್ರಥಮ ಆದ್ಯತೆ ಸಿಗುವಂತಾಗಬೇಕಿದೆ. ತಾಲ್ಲೂಕಿನ ಎಲ್ಲಾ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಆಯೋಜಿಸ ಬೇಕಿದೆ ಮತ್ತು ನೃತ್ಯ ಶಾಲಾ ವಿದ್ಯಾರ್ಥಿಗಳಿಗೆ ನೃತ್ಯದ ಜೊತೆಗೆ ಹಲವು ಆಟೋಟ ಸ್ಪರ್ಧೆಗಳು ಮತ್ತು ಕ್ರೀಡಾ ಕೂಟಗಳನ್ನು ಆಯೋಜಿಸಲು ಚಿಂತಿಸ ಬೇಕಿದೆ ಎಂದು ತಿಳಿಸಿದರು.

ತಾಲ್ಲೂಕು ಸಂಘದ ಸಂಚಾಲಕರಾದ ತಾಂಡವಂ ಡ್ಯಾನ್ಸ್ ಅಕಾಡೆಮಿ ನೃತ್ಯ ಸಂಯೋಜಕರಾದ ಚಂದನ್ ಮಾತನಾಡಿ ತಾಲ್ಲೂಕು ಭಾಗದ ಹಲವು ಪ್ರವಾಸಿ ತಾಣಗಳು, ನೃತ್ಯ ಶಾಲೆಗಳು, ಸಾರ್ವಜನಿಕ ಸ್ಥಳಗಳು ಮತ್ತು ಸರ್ಕಾರಿ ಶಾಲಾ ಆವರಣಗಳಲ್ಲಿ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುವಂತಾಗಬೇಕು. ಇದಕ್ಕೆ ಸಾರ್ವಜನಿಕರ ಮತ್ತು ಎಲ್ಲಾ ಪಂಚಾಯಿತಿಗಳ ಬೆಂಬಲ ಬೇಕಾಗಿದೆ ಎಂದು ತಿಳಿಸಿದರು.
ತಾಲ್ಲೂಕು ಸಂಘದ ಖಜಾಂಚಿಯಾದ ಕುಂದನ ನೃತ್ಯಾಲಯ ನೃತ್ಯ ಸಂಯೋಜಕಿಯಾದ ವಿನುತ ಮಾತನಾಡಿ, ಜಿಲ್ಲೆಯಲ್ಲಿ ವರ್ಷಂಪ್ರತಿ ಆಯೋಜಿಸುವ ದಸರಾ ಕಾರ್ಯಕ್ರಮಗಳಲ್ಲಿ ನಮ್ಮ ತಾಲ್ಲೂಕಿನ ನೃತ್ಯ ಶಾಲೆಗಳಿಗೆ ಆದ್ಯತೆ ನೀಡಬೇಕು ಮತ್ತು ನೃತ್ಯಕ್ಕೆ ಹೆಚ್ಚಿನ ಸಮಯಾವಕಾಶ ದೊರಕಬೇಕು ಎಂಬ ಮಾಹಿತಿ ನೀಡಿದರು. ಸದಸ್ಯರಾದ ಕಾವೇರಿ ನೃತ್ಯ ಶಾಲೆಯ ನೃತ್ಯ ಸಂಯೋಜಕಿ ವಿದುಷಿ ಕಾವೇರಿ ಮಂಜುನಾಥ್ ರವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೆಸ್ಟರ್ನ್ ನೃತ್ಯ ಗಳಿಗೆ ಹೆಚ್ಚಿನ ವೇದಿಕೆಗಳು ದೊರಕುತ್ತಿದೆ, ಆದರೆ ಭಾರತೀಯ ಶಾಸ್ತ್ರೀಯ ನೃತ್ಯ ವಾದಂತ ಭರತನಾಟ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ವೇದಿಕೆಗಳು ಸಿಗುವಂತಾಗಬೇಕು ಎಂದು ಬೇಡಿಕೆ ಇಟ್ಟರು. ಈ ಸಂದರ್ಭ ಕುಶಾಲನಗರ ತಾಲ್ಲೂಕು ನೃತ್ಯ ಸಂಯೋಜಕರ ಸಂಘದ ಸಂಚಾಲಕರಾದ ಡಿ.ಸಿ ಡ್ಯಾನ್ಸ್ ಸ್ಟುಡಿಯೋ ನಿಸಾರ್, ಸಂಘದ ಸದಸ್ಯರುಗಳಾದ ಎಂ.ಹೆಚ್.ಬಿ ಡ್ಯಾನ್ಸ್ ಕಮ್ಯೂನಿಟಿ ಸನು ಸುಕುಮಾರನ್, ಸ್ಟೆಪ್ ಡಾಟ್ ಡ್ಯಾನ್ಸ್ ಕ್ರಿವ್ ಕ್ರಿಸ್ಟೋಫರ್ ಜೀವನ್, ಯುನಿಕ್ ಶಾರದಾ ಕಲಾಕೇಂದ್ರದ ಶಾರದಾ, ಮೈಕಲ್ ಡ್ಯಾನ್ಸ್ ಕ್ರಿವ್ ಮೈಕಲ್ ಕೃತಿಕ್, ನಾಟ್ಯಾನಿಕೇತನ ನೃತ್ಯ ಶಾಲೆಯ ವಿದುಷಿ ಪೂರ್ಣಿಮಾ, ನಟರಾಜ ಸಂಗೀತ ಕಲಾಕೇಂದ್ರದ ಮುಖ್ಯಸ್ಥರಾದ ವಿದ್ವಾನ್ ಶಂಕರಯ್ಯ ರವರು ಹಾಜರಿದ್ದರು.
ಸಂಘದ ಉದ್ಘಾಟನಾ ಸಮಾರಂಭದ ದಿನಾಂಕ, ಸ್ಥಳ ಮತ್ತು ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!