ಕುಶಾಲನಗರ, ಆ 08: ನಂ. 568ನೇ ಕೊಡಗು ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘವು ಸುಮಾರು 30 ತಿಂಗಳ ಹಿಂದೆ ಪ್ರಾರಂಭವಾಗಿ ಮಾರ್ಚ್ 2026 ಅಂತ್ಯಕ್ಕೆ 1364 ಸದಸ್ಯರನ್ನು ಹೊಂದಿದೆ ಎಂದು ಸಂಘದ ಅಧ್ಯಕ್ಷ ಟಿ. ಎಸ್.ಶಾಂಭ ಶಿವಯ್ಯ ತಿಳಿಸಿದರು.
ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ರೂ 18.38 ಕೋಟಿ ವಹಿವಾಟನ್ನು ನಡೆಸಿದೆ. ಸಂಘದ ಮೂಲಕ ಸಾಲ ಪಡೆದ ಹಣವನ್ನು ಸಂಬಂಧಿಸಿದ ಸದಸ್ಯರು ಶೇ 100% ರಷ್ಟು ಮರುಪಾವತಿ ಮಾಡಿದ್ದಾರೆ. ಈ ಮೂಲಕ ರೂ 2.50 ಲಕ್ಷ ವಾರ್ಷಿಕ ಆದಾಯ ಬಂದಿದೆ ಎಂದು ಹೇಳಿದರು.
ಈ ಸೌಹಾರ್ದ ಸಂಘದಲ್ಲಿ ಸದಸ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಜಾಮೀನು ಸಾಲ, ವ್ಯಾಪಾರ ಸಾಲ, ಪಿಗ್ಮಿ ಸಾಲ, ಸ್ವಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ, ವಾಹನಗಳಿಗೆ ಮತ್ತು ಸಂಘದಿಂದ ನೀಡುವ ಸಾಲಕ್ಕೆ ವಿಮಾ ಸೌಲಭ್ಯ ಇರುತ್ತದೆ. ನಿರಕು ಠೇವಣಿಗಳಿಗೆ ಆಕರ್ಷಕ ಬಡ್ಡಿ ವ್ಯವಸ್ಥೆ ಇರುತ್ತದೆ ಎಂದರು.
ಈ ಸೌಹಾರ್ದ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಆಗಸ್ಟ್ 16 ರಂದು ಭಾನುವಾರ 11 ಗಂಟೆಗೆ ಕುಶಾಲನಗರದ ಎ.ಪಿ.ಸಿ.ಎಂ.ಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆಸಲಾಗುವುದು, ಸಭೆಗೆ ಬರುವ ಸಂಘದ ಸದಸ್ಯರು ಸಂಘದ ಗುರುತಿನ ಚೀಟಿ ಮತ್ತು ಮಹಾಸಭೆಯ ಆಮಂತ್ರಣ ಪತ್ರಿಕೆಯನ್ನು ತಮ್ಮೊಂದಿಗೆ ತರಲು ಅಧ್ಯಕ್ಷರು ವಿನಂತಿಸಿದರು.
ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎಸ್.ಬಸವಣ್ಣಯ್ಯ ಮಾತನಾಡಿ, ಸಂಘದ ವಹಿವಾಟಿನ ವಿವರ ಒದಗಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಚ್.ಪಿ. ಉದಯಕುಮಾರ್, ನಿರ್ದೇಶಕರಾದ ಹೆಚ್. ವಿ. ಶಿವಪ್ಪ, ಪುಟ್ಟರಾಜು ಹೆಚ್. ಎಸ್, ಸುರೇಶ್ ಎಸ್.ಎಸ್, ಮೋಕ್ಷಿಕ್ ರಾಜ್ ಹೊನ್ನಗುಡಿ, ಪ್ರಶಾಂತ್ ಕೆ.ಡಿ., ಮಮತಾ ಎ.ಆರ್. ಮತ್ತು ಯಶೋದ ಜಿ.ಎಸ್. ಇದ್ದರು.
Back to top button
error: Content is protected !!