ಟ್ರೆಂಡಿಂಗ್

ನವೀಕರಣಗೊಂಡ ಮಾದಾಪಟ್ಟಣ ಅಂಗನವಾಡಿ ಕೇಂದ್ರ ಉದ್ಘಾಟನೆ

ಖಾಯಂ ಶಿಕ್ಷಕಿ, ಸಹಾಯಕಿ ನೇಮಕಾತಿಗೆ ಒತ್ತಾಯ

ಕುಶಾಲನಗರ, ಆ 07: ಗುಡ್ಡೆಹೊಸೂರು ಗ್ರಾಪಂ ವತಿಯಿಂದ ನವೀಕರಣಗೊಂಡ ಮಾದಾಪಟ್ಟಣ ಅಂಗನವಾಡಿ ಕೇಂದ್ರ-1 ರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಕೇಂದ್ರವನ್ನು ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಮುಖಂಡ ದಾಮೋದರ್, ಪೋಷಕಿ ಶಶಿಕಲಾ ಮತ್ತು ಗುಡ್ಡೆಹೊಸೂರು ಗ್ರಾಪಂ ಮಾಜಿ ಅಧ್ಯಕ್ಷೆ ರುಕ್ಮಿಣಿ ಅವರು, ಸಿಡಿಪಿಓ ಅವರು ಈ ಕೇಂದ್ರದ‌ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಆರೋಪಿಸಿದರು.

4 ದಶಕಗಳ ಹಳೆಯದಾದ ಅಂಗನವಾಡಿ ಕೇಂದ್ರಕ್ಕೆ ಕಳೆದ 3 ದಶಕಗಳಿಂದ ಖಾಯಂ ಶಿಕ್ಷಕರ ನೇಮಕಾತಿಯಾಗಿಲ್ಲ. ಬೇರೆ ಊರಿನವರನ್ನು ನೇಮಕಾತಿ ಮಾಡುವ ಬದಲು ಕುಟುಂಬ ಸಹಿತ ಇದೇ ಗ್ರಾಮದಲ್ಲಿ ವಾಸವಿರುವವರಿಗೆ ಆದ್ಯತೆ ನೀಡಿ ನೇಮಕಾತಿ‌ ಮಾಡಬೇಕಿದೆ. ಆಗಾದಾಗ ಮಾತ್ರ ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗಲಿದೆ. ಜೊತೆಗೆ ಸಹಾಯಕಿ ನೇಮಕಾತಿ ಕೂಡ ಅಗತ್ಯವಿದೆ ಎಂದು ಆಗ್ರಹಿಸಿದರು. ಈ ಸಂದರ್ಭ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್, ಗ್ಯಾರೆಂಟಿ ಅನುಷ್ಠಾನ ಸಮಿತಿ ತಾಲೂಕು ಸದಸ್ಯ ಆದಂ, ಗುಡ್ಡೆ ಹೊಸೂರು ವಲಯ ಯುವ ಘಟಕ ಅಧ್ಯಕ್ಷ ವಿಜಯ್, ಗ್ರಾಮಸ್ಥರಾದ ಬಸವರಾಜು ಎಂ.ಎಂ, ಬೂತ್ ಅಧ್ಯಕ್ಷ ಹೆಚ್.ಕೆ ಮಹೇಶ್, ಎಂ.ಎಲ್. ಪ್ರಕಾಶ್, ಎಂ.ಆರ್.ರವಿ, ಶಿಕ್ಷಕಿ ರೂಪಶ್ರೀ ಸೇರಿದಂತೆ ಪೋಷಕ ವೃಂದದವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!