ಪೊಲೀಸ್

ಕೊಡಗಿನ ವಿವಿಧೆಡೆ ಲೋಕಾಯುಕ್ತ ದಾಳಿ

ಕುಶಾಲನಗರ, ಜು 23: ಕೊಡಗಿನ ವಿವಿಧೆಡೆ ಲೋಕಾಯುಕ್ತ ದಾಳಿ ನಡೆದಿದೆ. ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ  ವಿರುದ್ದ ದೂರು ಹಿನ್ನೆಲೆಯಲ್ಲಿ ಕೊಡಗಿನ ವಿವಿಧ ಕ್ರೀಡಾಶಾಲೆಗಳಲ್ಲಿ ಅಧಿಕಾರಿಗಳ ತಂಡ ಪರಿಶೀಲನೆಯಲ್ಲಿ ತೊಡಗಿಸಿಕೊಂಡಿದೆ. ಕೂಡಿಗೆ ಮಡಿಕೇರಿ, ಪೊನ್ನಂಪೇಟೆ ಕ್ರೀಡಾಶಾಲೆಗಳಲ್ಲಿ ಮೂರು ತಂಡಗಳಿಂದ ಕಡತಗಳ ಪರಿಶೀಲನೆ‌ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಸಮರ್ಪಕ ಸೌಲಭ್ಯಗಳನ್ನು ಒದಗಿಸದ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!