ಕ್ರೀಡೆ

ಸಿ.ಐ.ಎಸ್.ಸಿ.ಇ ಶಾಲೆಗಳ ವಲಯ ಮಟ್ಟದ ಫುಟ್‌ಬಾಲ್ ಕ್ರೀಡಾಕೂಟ

ಕುಶಾಲನಗರ, ಜು 07: ಸಿ.ಐ.ಎಸ್.ಸಿ.ಇ ಶಾಲೆಗಳ ವಲಯ ಮಟ್ಟದ ಫುಟ್‌ಬಾಲ್ ಕ್ರೀಡಾಕೂಟವು ಕುಶಾಲನಗರದ ಉದ್ಗಮ್ ಶಾಲೆಯ ಆತಿಥ್ಯದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ವಿವಿಧ ಜಿಲ್ಲೆಗಳಾದ ಕೊಡಗು, ಮೈಸೂರು, ಹಾಸನ, ಮಂಡ್ಯ ಮತ್ತು ಚಾಮರಾಜನಗರಗಳಿಂದ ಸುಮಾರು 23 ತಂಡಗಳು ಆಗಮಿಸಿದ್ದವು. ಈ ಕ್ರೀಡಾಕೂಟದಲ್ಲಿ 14 ರ ವಯೋಮಿತಿಯ ಪಂದ್ಯಾಟದಲ್ಲಿ ಕೂರ್ಗ್ ಪಬ್ಲಿಕ್ ಸ್ಕೂಲ್, ಗೋಣಿಕೊಪ್ಪ ಪ್ರಥಮ ಸ್ಥಾನ, ಉದ್ಗಮ್ ಶಾಲೆ, ದ್ವಿತೀಯ ಸ್ಥಾನವನ್ನು ಮತ್ತು 17 ರ ವಯೋಮಿತಿಯ ಪಂದ್ಯಾಟದಲ್ಲಿ ಡಿ.ಪೌಲ್, ಮೈಸೂರು ತಂಡ ಪ್ರಥಮ ಸ್ಥಾನ ಮತ್ತು ಜನರಲ್ ತಿಮ್ಮಯ್ಯ ಶಾಲೆ, ಮಡಿಕೇರಿ ತಂಡ ದ್ವಿತೀಯ ಸ್ಥಾನವನ್ನು ಹಾಗೂ 19 ರ ವಯೋಮಿತಿಯ ವಿಭಾಗದಲ್ಲಿ ಡಿ.ಪೌಲ್, ಮೈಸೂರು ತಂಡ ಪ್ರಥಮ ಸ್ಥಾನವನ್ನು, ಕ್ಯಾಲ್ಸ್, ಗೋಣಿಕೊಪ್ಪ ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು. ಎಲ್ಲಾ ತಂಡಗಳಿಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಕೊಡಗು ಫುಟ್‌ಬಾಲ್ ಕ್ಲಬ್‌ನ ಅಧ್ಯಕ್ಷ. ಪೊನ್ನಪ್ಪ ಐ.ಎಸ್, ರವರು ಹಾಗೂ ಉದ್ಗಮ್ ಸಂಸ್ಥೆಯ ಪ್ರಾಂಶುಪಾಲ  ಬೋಪಣ್ಣ ಬಿ.ಪಿ, ರವರು ಬಹುಮಾನಗಳನ್ನು ವಿತರಿಸಿ ಮುಂದಿನ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಶುಭ ಕೋರಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!