ಕಾರ್ಯಕ್ರಮ

ಶರಣ ಸಾಹಿತ್ಯ ಪ್ರಥಮ ಸಮ್ಮೇಳನಕ್ಕೆ ಕುಶಾಲನಗರಕ್ಕೆ ಆಗಮಿಸಿದ ಸುತ್ತೂರು ಸ್ವಾಮೀಜಿಗೆ ಸ್ವಾಗತ

ಕುಶಾಲನಗರ, ಜೂ 23: ಕೊಡಗು ಜಿಲ್ಲಾ ಅಖಿಲ‌ ಭಾರತ ಶರಣ ಸಾಹಿತ್ಯ ಪರಿಷತ್ತಿನ ಶರಣ ಸಾಹಿತ್ಯ ಪ್ರಥಮ ಸಮ್ಮೇಳನ ಕುಶಾಲನಗರದಲ್ಲಿ ವಿಜೃಂಭಣೆಯಿಂದ ಜರುಗಿತು.

ಸಮ್ಮೇಳನಾಧ್ಯಕ್ಷರಾದ ವಿರಾಜಪೇಟೆ ಅರಮೇರಿ ಕಳಂಚೇರಿ‌ ಮಠಾಧೀಶರಾದ ಶ್ರೀ ಶಾಂತ‌ಮಲ್ಲಿಕಾರ್ಜುನ ಸ್ವಾಮೀಜಿ ಅವರನ್ನು ರಥಬೀದಿಯ ಬಸವೇಶ್ವರ ದೇವಾಲಯ ಬಳಿಯಿಂದ ರೈತ ಸಹಕಾರ ಭವನದ ಶ್ರೀ ದೊಡ್ಡ ವೀರರಾಜೇಂದ್ರ ವೇದಿಕೆಗೆ ಅಲಂಕೃತ ಮಂಟಪದಲ್ಲಿ ಜನಪದ ಕಲಾತಂಡಗಳು ಸಮ್ಮುಖದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.

ಸಮ್ಮೇಳನಕ್ಕೆ ಆಗಮಿಸಿದ
ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರು ಕೊಡಗು-ಮೈಸೂರು ಗಡಿ‌ ಕಾವೇರಿ ಮಾತೆ ಕ್ಷೇತ್ರದಲ್ಲಿ ಪೂಜೆ‌ ಸಲ್ಲಿಸಿದ ಬಳಿಕ ಸಮ್ಮೇಳನದಲ್ಲಿ‌ ಭಾಗಿಯಾದರು. ವಿವಿಧ ಮಠಾಧೀಶರುಗಳು ಸುತ್ತೂರು ಮಠಾಧೀಶರನ್ನು ಮಾಡಿಕೊಂಡರು. ಬಾರವಿ ಕಾವೇರಿ ಕನ್ನಡ ಸಂಘದ ರವೀಂದ್ರ ಪ್ರಸಾದ್, ಬಬೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!